ನಾಳೆಯಿಂದ ಬನಶಂಕರಿ ಜಾತ್ರೋತ್ಸವ

Banashankari Jatrotsava from tomorrow
ಬನಶಂಕರಿದೇವಿ
Published on

ನಿಡಗುಂದಿ: ಪಟ್ಟಣದ ಜಾಗೃತ ದೇವಿ ಬನಶಂಕರಿದೇವಿ ಜಾತ್ರಾ ಮಹೋತ್ಸವ ನ.19ರಿಂದ ನಡೆಯಲಿದೆ.

ಅಂದು ಬೆಳಗ್ಗೆ 9ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪುರವಂತರ ಸೇವೆ ಹಾಗೂ ಸುಮಂಗಲೆಯರ ಕುಂಭಮೇಳದೊಂದಿಗೆ ಮಹಾದಾನಿ ಬಸಪ್ಪ ಶೇಡಗಟ್ಟಿ ಅವರ ಭಾವಚಿತ್ರ ಮೆರವಣಿಗೆ, ನಂತರ ದೇವಿಗೆ ಕುಂಭಾಭಿಷೇಕ, ಸಂಜೆ ಸಂಗಮೇಶ ಗೌಡರ ಅವರ ಮನೆಯಿಂದ ಮಾಲೆ ಉತ್ಸವ ನಡೆಯಲಿದೆ.

ರಾತ್ರಿ ರಸಮಂಜರಿ ನಡೆಯಲಿದೆ. ನ.20ರಂದು ಬೆಳಗ್ಗೆ 10ಗಂಟೆಗೆ ಕಲಶೋತ್ಸವ, ಸಂಜೆ ರಥೋತ್ಸವ, ರಾತ್ರಿ ಬನಶಂಕರಿ ತರುಣ ನಾಟ್ಯ ಸಂದಿಂದ ನಾಟಕ ಪ್ರದರ್ಶನ ನಡೆಯಲಿದೆ. ನ.21ರಂದು ಮಧ್ಯಾಹ್ನ ಗೊಂಬೆಗಳ ಕುಣಿತ, ಕುದುರೆಗಳ ಕುಣಿತ, ಡೊಳ್ಳಿನ ನಾದದೊಂದಿಗೆ ದ್ಯಾಮವ್ವನ ಸೋಗು ವಿಜೃಂಭನೆಯಿಂದ ನಡೆಯಲಿದೆ. ಸಂಜೆ ಜಂಗಿಕುಸ್ತಿ, ರಾತ್ರಿ ರಸಮಂಜರಿ ಜರುಗುವುದು.

ನ.22ರಂದು ರಾತ್ರಿ ನಾಟಕ ಮರು ಪ್ರದರ್ಶನವಾಗಲಿದೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net