ನಾಳೆಯಿಂದ ಪನ್ನಂಗಾಲತಮ್ಮೆ ದೇವರ ಉತ್ಸವ

10 gkp 01
Published on

ಗೋಣಿಕೊಪ್ಪ: ಅರಮೇರಿ ಗ್ರಾಮದ ಪನ್ನಂಗಾಲತಮ್ಮೆ ದೇವರ ಉತ್ಸವ ಏ.12, 13ರಂದು ಜರುಗಲಿದೆ.


12ರಂದು ಬೆಳಗ್ಗೆ ದೇವತಕ್ಕ ಬಾಚೀರ ಕುಟುಂಬದ ಐನ್ ಮನೆಯಿಂದ ಭಂಡಾರ ಇಳಿಸುವ ಶಾಸ್ತ್ರ ನಡೆಯಲಿದೆ. ನಂತರ ಗರ್ಭಗುಡಿ ಶುದ್ಧ, ಪ್ರಭಾವಳಿ ಅಲಂಕಾರ, ಅಕ್ಕಿಯೊಂದಿಗೆ ದೇವಸ್ಥಾನಕ್ಕೆ ಒಪ್ಪಿಸಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ದೇವರು ಹೊರ ಬರುತ್ತದೆ. ಕಣಿಯ ಜನಾಂಗದ ಚೆರಿಯಕಂಡ ಕುಟುಂಬದಿಂದ ಕೊಡೆ ಒಪ್ಪಿಸುವ ಆಚರಣೆ, ಭಂಡಾತ ತಕ್ಕ ಬಲ್ಟಿಕಾಳಂಡ ಮತ್ತು ದೇವತಕ್ಕ ಬಾಚೀರ ಕುಟುಂಬದಿಂದ ಎತ್ತ್ ಪೋರಾಟ, ಹರಕೆ ಎತ್ತ್ ಪೋರಾಟ ನಡೆಯುತ್ತದೆ. ಈ ಸಂದರ್ಭ ಹರಕೆ ಹೊತ್ತವರು ದೇವರಿಗೆ ಮಗುವಿನೊಂದಿಗೆ ತೊಟ್ಟ್‌ಕುಂಞಿ ಹರಕೆ ತೀರಿಸುವರು. ರಾತ್ರಿ ವಿಶೇಷ ಪೂಜೆ ನಡೆಯುತ್ತದೆ.


13ರಂದು ಚಾವುಂಡಿ ದೇವರಿಗೆ ಪ್ರಸಾದ ಅರ್ಪಣೆ, ಕುರ್‌ಂಜ ಕಳಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ತೆಂಗೆ ಪೋರ್, ಸಂಜೆ ದೇವರ ಸ್ನಾನ ಆಚರಣೆ ನಡೆಯಲಿದೆ.
ಮರು ಪ್ರತಿಷ್ಠಾಪನೆ: ಕಳೆದ ವರ್ಷ ದೇವಸ್ಥಾನ ಸಂಪೂರ್ಣವಾಗಿ ಕುಸಿದ ಹಿನ್ನೆಲೆಯಲ್ಲಿ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನವನ್ನು ಮರು ನಿರ್ಮಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net