

ದೊಡ್ಡಬಳ್ಳಾಪುರ: ದ್ವೀತಿಯ ಪಿಯು ಪರೀೆ ಮಾ.1ರಂದು ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ಈ ಬಾರಿ 11,431 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಎನ್.ಮೋಹನ್ ಕುಮಾರ್ ಹೇಳಿದರು.
ನಗರದ ಸರ್ಕಾರಿ ಪಿಯು ಕಾಲೇಜಿಗೆ ಗುರುವಾರ ಭೇಟಿ ನೀಡಿ ಪರೀಕ್ಷೆ ಕೇಂದ್ರಗಳನ್ನು ಪರಿಶೀಲಿಸಿ, ಮಾರ್ಚ್ 1ರಿಂದ 20ವರೆಗೆ ನಡೆವ ದ್ವೀತಿಯ ಪಿಯು ವಾರ್ಷಿಕ ಪರೀಕ್ಷೆಗೆ ಕೈಗೊಂಡಿರುವ ಸಿದ್ಧತೆ ಕುರಿತು ಮಾಹಿತಿ ನೀಡಿ, ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 3, ದೇವನಹಳ್ಳಿ ತಾಲೂಕಿನಲ್ಲಿ 3, ಹೊಸಕೋಟೆ ತಾಲೂಕಿನಲ್ಲಿ 5 ಮತ್ತು ನೆಲಮಂಗಲ ತಾಲೂಕಿನಲ್ಲಿ 6 ಒಟ್ಟು 17 ಪರೀಕ್ಷೆ ಕೇಂದ್ರಗಳಲ್ಲಿ ದ್ವೀತಿಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಕಲ ಸಿದ್ಧತೆ ನಡೆಸಲಾಗಿದೆ. ದ್ವೀತಿಯ ಪಿಯು ಪರೀಕ್ಷೆಗೆ ನೋಂದಾಯಿಸಿಕೊಂಡಿರುವ 11,341 ವಿದ್ಯಾರ್ಥಿಗಳಲ್ಲಿ 10,757 ಹೊಸ ವಿದ್ಯಾರ್ಥಿಗಳು, 183 ಖಾಸಗಿ ವಿದ್ಯಾರ್ಥಿಗಳು, 401 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.