ನಾಳೆ ಹಾಸನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ

DK Shivakumar
Published on

ಹಾಸನ: ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಬೆ.10.30ಕ್ಕೆ ಹಾಸನದ ಭುವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿ ಬೆಳಗ್ಗೆ 11 ಗಂಟೆಗೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಯ ಎಲೆಕ್ಟ್ರಿಕಲ್ ಸಬ್‌ಸ್ಟೇಶನ್ ಕಾಮಗಾರಿ ಪರೀಶಿಲನೆ ನಡೆಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ವಿತರಣಾ ತೊಟ್ಟಿ-03 (ಡಿಸಿ-3) ದೊಡ್ಡ ನಗರ ಹಾಗೂ ಯೋಜನೆಯ ಪ್ರಗತಿ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ವಿಯರ್-4 ಕಾಡು ಮನೆ ಎಸ್ಟೇಟ್, ಸಕಲೇಶಪುರ ಅನೆಮಹಲ್ ಮಾರ್ಗವಾಗಿ ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ. ನಂತರ ಸಂಜೆ 5.15ಕ್ಕೆ ವಿಯರ್ 01 (ಡಿ.ಸಿ-1) ಭೇಟಿ ನೀಡಿ ನಂತರ ಸಂಜೆ 6 ಗಂಟೆಗೆ ಸಕಲೇಶಪುರ ಪರಿವೀಕ್ಷಣಾ ಮಂದಿರಕ್ಕೆ ಆಗಮಿಸಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net