ನಾಳೆ ಶ್ರೀ ರೇಣುಕಾಯಲ್ಲಮ್ಮ ದೇವಿ ಜಾತ್ರೆ

CTD sri renukayallamma devi----
Published on

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆ ಶಾರದಮ್ಮ ಆರ್.ಎಸ್.ರುದ್ರಪ್ಪ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ಫೆ.12ರಂದು ಭಾರತ ಹುಣ್ಣಿಮೆ ಅಂಗವಾಗಿ 78ನೇ ವರ್ಷದ ಶ್ರೀ ರೇಣುಕಾಯಲ್ಲಮ್ಮದೇವಿ ಜಾತ್ರೆ ಮ ಹೋತ್ಸವ ಹಮ್ಮಿಕೊಳ್ಳಲಾಗಿದೆ. 12ರಂದು ಬುಧವಾರ ದೇವಿಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುಷ್ಪ ಅಲಂಕಾರದೊಂದಿಗೆ ವಿಶೇಷ ದರ್ಶನ ಇರಲಿದೆ. ಅಂದು ದೇವಿಗೆ ಮಡ್ಲಕ್ಕಿ ಮತ್ತು ಪಡ್ಡಲಿಗೆ ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂದು ಬೆಳಗ್ಗೆ 7ರಿಂದ ರಾತ್ರಿ 10 ರವರೆಗೆ ಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೀರ್ಥ, ಪ್ರಸಾದ ಸ್ವೀಕರಿಸಿ, ದೇವಿ ಕೃಪೆಗೆ ಪಾತ್ರರಾಗ ಬೇಕೆಂದು ದೇವಸ್ಥಾನದ ಮುಖ್ಯಾಧಿಕಾರಿ ಎಲ್. ತುಕಾರಾಮ ಚವ್ಹಾಣ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net