

ಚಿತ್ರದುರ್ಗ:ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆ,ಶ್ರೀಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಹಾರ್ಟ್‌ಫುಲ್ ನೆಸ್ ಧ್ಯಾನ ಕೇಂದ್ರ ಹಾ ಗೂ ಜಿಲ್ಲಾ ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ಡಿ.21ರಂದು ಬೆಳಗ್ಗೆ 5.30ಕ್ಕೆ ನಗರದ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ವಿಶ್ವ ಧ್ಯಾನದಿನಾಚರಣೆ ಅಂಗವಾಗಿ ಸಾಮೂಹಿಕ ಧ್ಯಾನ ಕಾರ‌್ಯಕ್ರಮ ಆಯೋಜಿಸಲಾಗಿದೆ. ಆಯುಷ್ ಇಲಾಖೆಯ ಡಾ.ಶಿವಕು ಮಾರ್,ಡಾ.ಪಿ.ವಿಜಯಲಕ್ಷ್ಮೀ,ಯೋಗ ಶಿಕ್ಷಕ ಮಹಾಲಿಂಗಪ್ಪ ಉಪಸ್ಥಿತರಿರುವರು. ಧ್ಯಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ‌್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆ ಕೋರಿದೆ.
ಶನಿವಾರ ಸಾಮೂಹಿಕ ಧ್ಯಾನ ಕಾರ‌್ಯಕ್ರಮ
ಚಿತ್ರದುರ್ಗ:ನಗರದ ಕೆಳಗೋಟೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ವಿಶ್ವ ಧ್ಯಾನ ದಿ ನಾಚರಣೆ ಅಂಗವಾಗಿ ಡಿ.21ರಂದು ಬೆಳಗ್ಗೆ 7ಕ್ಕೆ ಸಾಮೂಹಿಕ ಧ್ಯಾನ ಕಾರ‌್ಯಕ್ರಮ ಆಯೋಜಿಸಲಾಗಿದೆ. ಧ್ಯಾನ ಮಾಧ್ಯಮ ದಿಂದ ನಮ್ಮ ಆ ಂತರಿಕ ಶಕ್ತಿಗಳನ್ನು ನಾವು ಜಾಗೃತಗೊಳಿಸಬಹುದಾಗಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಈ ಕಾರ‌್ಯಕ್ರಮದ ಪ್ರಯೋಜನ ಪ ಡೆದುಕೊಳ್ಳ ಬೇಕೆಂದು ಪ್ರಜಾಪಿತ ಬ್ರಹ್ಮ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಟಣೆ ಮನವಿ ಮಾಡಿದೆ.