ಕೊಳ್ಳೇಗಾಲ: ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅಕ್ಕನ ಬಳಗ, ವೀರಶೈವ ಮಹಿಳಾ ವೇದಿಕೆಯಿಂದ ಅ.26ರ ಮಧ್ಯಾಹ್ನ 2.30ಕ್ಕೆ ವಚನ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ವಚನ ಕುಮಾರಸ್ವಾಮಿ ಹಾಗೂ ಅವರ ಪತ್ನಿ ರೂಪಾ ವಚನ ಕುಮಾರಸ್ವಾಮಿ ಪಾಲ್ಗೊಂಡು ವಚನದ ಬಗ್ಗೆ ವ್ಯಾಖ್ಯಾನ ನೀಡಲಿದ್ದಾರೆ. ಸದಸ್ಯರ ಮಕ್ಕಳಿಂದ ಶರಣ-ಶರಣೆಯರ ವೇಷ ಭೂಷಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಳಗದ ಸದಸ್ಯೆಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಅಕ್ಕನ ಬಳಗ ಅಧ್ಯಕ್ಷೆ ಅರುಣಾ ಕಾರ್ತಿಕ್ ಹಾಗೂ ಕಾರ್ಯದರ್ಶಿ ಸವಿತಾ ಲೋಕೇಶ್ ಪ್ರಕಟಣೆಯಲ್ಲಿ ಮನವಿಮಾಡಿದ್ದಾರೆ.