ನಾಳೆ ಮುಸ್ಲಿಂ ಬೃಹತ್ ಸಮಾವೇಶ

13blrp1-noor ahamad (1)
ನೂರ್ ಅಹಮದ್
Published on

ಬೇಲೂರು: ಬೇಲೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾ.15ರಂದು ಸ್ವಾಭಿಮಾನಿ ಮುಸ್ಲಿಂ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ನೂರ್ ಅಹಮದ್ ಹೇಳಿದರು.

ನಮ್ಮ ಸಮುದಾಯದವರು ರಾಜಕೀಯದಲ್ಲಿದ್ದರೂ ಸಮುದಾಯದ ಅಭಿವೃದ್ಧಿಗೆ ಗಮನ ಹರಿಸಿಲ್ಲ. ಇದರಿಂದ ಸಮಾಜದ ಅಭಿವೃದ್ಧಿ ಕುಂಠಿತವಾಗಿದೆ. ನಾವು ಇದುವರೆಗೂ ನಮಗಾಗಿ ಹೋರಾಟ ಮಾಡಿಲ್ಲ. ಇಂತಹ ಹಲವಾರು ಸಮಸ್ಯೆಗಳ ಬಗ್ಗೆ ಸಮುದಾಯದ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಉಪಾಧ್ಯಕ್ಷ ಸುಲೈಮಾನ್, ಬಂಟೇನಹಳ್ಳಿ ಗ್ರಾಪಂ ಸದಸ್ಯ ಇಸ್ಮಾಯಿಲ್, ಸಾಮಾಜಿಕ ಕಾರ್ಯಕರ್ತ ಮುಜಮಿಲ್ ಪಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net