

ಚಿತ್ರದುರ್ಗ: ಜಿಲ್ಲಾಡಳಿತದಿಂದ ಮಹಾತ್ಮಾ ಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಡಿಸಿ ಕಚೇರಿಯಲ್ಲಿ ಅ.2ರಂದು ಬೆಳಗ್ಗೆ 10ಕ್ಕೆ ಆಚರಿಸಲಾಗುತ್ತಿದೆ. ಕಾರ‌್ಯಕ್ರಮಕ್ಕೆ ಎಲ್ಲ ಇಲಾಖಾ ಅಧಿಕಾರಿಗಳು,ಸಿಬ್ಬಂದಿ ಕಡ್ಡಾಯವಾಗಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾ ರಸ್ವಾಮಿ ಅವರು ತಿಳಿಸಿದ್ದಾರೆ.
ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರು
ವಾರ್ತಾ ಇಲಾಖೆ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಜಿಲ್ಲೆಯ ಪ್ರೌಢಶಾಲೆ,ಪಪೂ ಕಾಲೇಜು ಹಾಗೂ ಪದವಿ/ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟಿಸಿದೆ. ಪ್ರೌಢಶಾಲಾ ವಿಭಾಗದಲ್ಲಿ ಚಳ್ಳಕೆರೆ ತಾಲೂ ಕು ಚನ್ನಮ್ಮನಾಗತಿಹಳ್ಳಿ ಕೃಷ್ಣ ಪೌಢಶಾಲೆಯ ಎಚ್.ಅಕ್ಷತಾ(ಪ್ರ),ಹೊಸದುರ್ಗ ತಾಲೂಕು ಆನಿವಾಳದ ಸ.ಪ.ಪೂ.ಕಾಲೇಜಿನ ಜಮುನಾ(ದ್ವಿ)ಹಾಗೂ ಹಿರಿಯೂರು ತಾಲೂಕು ಯರಬಳ್ಳಿ ಸ.ಪ.ಪೂ.ಕಾಲೇಜು ವಿದ್ಯಾರ್ಥಿನಿ ಅಂಕಿತಾ(ತೃ)ಬಹುಮಾನ ಪಡೆದಿದ್ದಾರೆ.
ಪ.ಪೂ.ಕಾಲೇಜು ವಿಭಾಗದಲ್ಲಿ ಚಿತ್ರದುರ್ಗ ತಾಲೂಕು ಗಾರೆಹಟ್ಟಿ ಬೃಹನ್ಮಠ ಸಂಯುಕ್ತ ಪ.ಪೂ.ಕಾಲೇಜಿನ ನಯನಾ(ಪ್ರ),ಎಸ್‌ಆರ್‌ಎಸ್ ಕಾ ಲೇಜಿನ ಮಹಾಲಕ್ಷ್ಮೀ(ದ್ವಿ)ಹಾಗೂ ಚಿತ್ರದುರ್ಗ ಬಾಲಕರ ಸ.ಪ.ಪೂ.ಕಾಲೇಜಿನ ಉದಯಕಿರಣ್(ತೃ)ಸ್ಥಾನ ಪಡೆದಿದ್ದಾರೆ.
ಪದವಿ ಕಾಲೇಜು ವಿಭಾಗದಲ್ಲಿ ಸಿರಿಗೆರೆಯ ಎಂಬಿಆರ್ ಪದವಿ ಕಾಲೇಜಿನ ಕೆ.ಎಂ.ಶ್ರೀರಕ್ಷಾ(ಪ್ರ),ಚಿತ್ರದುರ್ಗ ಎಸ್‌ಜೆಎಂ ಕಾಲೇಜಿನ ಎಸ್. ಸಲ್ಮಾ(ದ್ವಿ)ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕೆ.ಟಿ.ರಮ್ಯಾ(ತೃ)ಬಹುಮಾನ ಪಡೆದಿದ್ದಾರೆ.
ಪ್ರಥಮ,ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಿಗೆ ಕ್ರಮವಾಗಿ 3000 ರೂ.,2000 ರೂ.ಹಾಗೂ 1000 ರೂ.ನಗದು ಮತ್ತು ಪ್ರಮಾಣಪತ್ರಗಳನ್ನು 2ರಂದು ಏರ್ಪಡಿಸಿರುವ ಮಹಾತ್ಮಾ ಗಾಂಧೀಜಿ ಜಯಂತಿ ಕಾರ‌್ಯಕ್ರಮದಲ್ಲಿ ವಿತರಿಸಲಾಗುವುದೆಂದು ಕುಮಾರಸ್ವಾಮಿ ತಿಳಿಸಿದ್ದಾರೆ.