

ಹಾಸನ : ನಗರದ ಪೆಂಡಾಲ್ ಗಣಪತಿಯ 70ನೇ ವರ್ಷದ ಮಹೋತ್ಸವ ಸೆ. 7 ರಿಂದ 28ರ ವರೆಗೆ ನಡೆಯಲಿದ್ದು ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮಿಕೊಳ್ಳಲಾಗಿದೆಯೆಂದು ಗಣಪತಿ ಸೇವಾ ಸಮಿತಿ ಅಧ್ಯಕ್ಷ ಡಾ.ಹೆಚ್.ನಾಗರಾಜು ಅವರು ತಿಳಿಸಿದರು.
ಸೆ. 7ರ ಮಧ್ಯಾಹ್ನ 12.30ಕ್ಕೆ ಗಣಪತಿ ಪ್ರತಿಷ್ಟಾಪಿಸಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಗುವುದು. ಶಾಸಕ ಎಚ್.ಪಿ.ಸ್ವರೂಪ್, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಸೇರಿ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 6 ರಿಂದ 7 ಮತ್ತು 7 ರಿಂದ 9.30ರ ವರೆಗೆ 2 ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಸೆ. 15ರ ಭಾನುವಾರ ಬೆಳಿಗ್ಗೆ ಶತರುದ್ರಾಭಿಷೇಕ ನೆರವೇರುವುದು. ಸೆ. 22ರ ಭಾನುವಾರ ಶ್ರಿ ಮಹಾಗಣಪತಿ ಹೋಮ ಜರುಗಲಿದೆ. ಸೆ. 28ರ ಶನಿವಾರ 10 ಗಂಟೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸ್ವರ್ಣಗೌರಿ-ಗಣಪತಿ ಮೂರ್ತಿ ಮೆರವಣಿಗೆ ನಡೆಯಲಿದೆ. ನಂತರ ದೇವಿಗೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ನೆರವೇರಲಿದೆ ಎಂದರು.