

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ರಬಕವಿ ತೋಟದ ವಸತಿಪ್ರದೇಶದ ಅಪ್ಪಯ್ಯ ಸ್ವಾಮೀಜಿ ಜಾತ್ರಾ ಮಹೋತ್ಸವವು ಏ.19ರಿಂದ 20ರ ವರೆಗೆ ಜರುಗಲಿದೆ.
19 ರಂದು ಬೆಳಗ್ಗೆ ದೇವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಗ್ರಾಮದ ಹನುಮ ದೇವಸ್ಥಾನದಿಂದ ರಬಕವಿ ತೋಟದವರೆಗೆ ಕುಂಭೋತ್ಸವ, 11 ಗಂಟೆಗೆ ರಥದ ಕಳಸಾರೋಹಣ ಜರುಗುವುದು. ಮಧ್ಯಾಹ್ನ 1ಗಂಟೆಗೆ ಮಹಾಪ್ರಸಾದ, ಸಂಜೆ ಮನರಂಜನೆ, ರಾತ್ರಿ 10ಕ್ಕೆ ತುಬಚಿ ಶಿವಲಿಂಗೇಶ್ವರಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹಾಗೂ ಭರತನೂರ ವಿರಕ್ತಮಠದ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
20ರಂದು ಬೆಳಗ್ಗೆ ಎತ್ತಿನ ಬಂಡೆಯಲ್ಲಿ ಕಷ್ಣಾ ನದಿಯಿಂದ ನೀರು ತರುವುದು. ರುದ್ರಾಭಿಷೇಕ, ಮಹಾಪೂಜೆ ಹಾಗೂ ಬಿಲ್ವಾರ್ಚನೆ, ಕರಿಸಿದೆಟಛೀಶ್ವರ ಹಾಗೂ ಅಪ್ಪಸ್ವಾಮೀಜಿ ಪಲ್ಲಕ್ಕಿ ಉತ್ಸವ, ಕರಡಿಮಜಲು ಹಾಗೂ ಶಹನಾಯಿ ವಾದನ, 12 ಗಂಟೆಗೆ ಡಾ. ಮಲ್ಲಿಕಾರ್ಜುನ ಹಿರೇಮಠ ಅವರಿಂದ ಪ್ರವಚನ, 1ಕ್ಕೆ ಚಂದ್ರಮಾ ಕಲ್ಲು ಎತ್ತುವುದು, ಸಂಜೆ 5 ಗಂಟೆಗೆ ರಥೋತ್ಸವ ಜರುಗುವುದು. ತುಬಚಿ ಶಿವಲಿಂಗೇಶ್ವರಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಚಾಲನೆ ನೀಡುವರು. ಶಾಸಕ ಲಕ್ಷ$್ಮಣ ಸವದಿ ಅಧ್ಯತೆ ವಹಿಸುವರು. ರಾತ್ರಿ 10:30 ಕ್ಕೆ ಮಗ ಹೋದರೂ ಮಾಂಗಲ್ಯ ಬೇಕು ನಾಟಕ ಪ್ರದರ್ಶನವಾಗಲಿದೆ ಎಂದು ಜಾತ್ರಾ ಕಮಿಟಿ ಅಧ್ಯ ಸದಾಶಿವ ರಬಕವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,