ನಾಳೆ ಐಟಿಐದಲ್ಲಿ ಅಪ್ರೆಂಟಿಸ್ ಮೇಳ

Published on

ಕಲಬುರಗಿ : ಕಲಬುರಗಿಯ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇದೇ‌ ಜುಲೈ 12 ರಂದು ಅಪ್ರೆಂಟಿಸ್ ಮೇಳ ಆಯೋಜಿಸಿದ್ದು, ಶಿಶಿಕ್ಷು ತರಬೇತಿ ಪಡೆಯಲಿಚ್ಚಿಸುವ ಐ‌.ಟಿ.ಐ ಪಾಸಾದ ಅಭ್ಯರ್ಥಿಗಳು ಇದರಲ್ಲಿ‌ ಭಾಗವಹಿಸಬಹುದಾಗಿದೆ ಎಂದು‌ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಅಪ್ರೆಂಟಿಸ್ ಮೇಳದಲ್ಲಿ ವಿವಿಧ ಕಂಪನಿಯವರು ಭಾಗವಹಿಸಲಿದ್ದಾರೆ. ಜಿಲ್ಲೆಯ ವಿವಿಧ ವೃತ್ತಿಗಳಲ್ಲಿ ಐ.ಟಿ.ಐ. ಪಾಸಾದ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. ಮತ್ತು ಐ.ಟಿ.ಐ ಅಂಕಪಟ್ಟಿ ತಲಾ 4 ಜೆರಾಕ್ಸ್ ಪ್ರತಿ, ಆಧಾರ ಪ್ರತಿ, ಇನ್ನಿತರ ದಾಖಲೆಗಳು ಹಾಗೂ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರದೊಂದಿಗೆ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ನೋಂದಣಿ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗೆ ಐ.ಟಿ.ಐ ಸಂಸ್ಥೆಯ ದೂರವಾಣಿ ಸಂ.08472-236753 ಅಥವಾ ಕಛೇರಿ ಅಧೀಕ್ಷಕ ದತ್ತಾತ್ರೇಯ 9611178215 ಹಾಗೂ ದ್ವಿ.ದ.ಸ. ಆನಂದ-9743816846 ಇವರನ್ನು ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net