

ಹಾಸನ: ಜಿಲ್ಲೆಯ ಪ್ರಮುಖ ಆರೋಗ್ಯ ಸಂಸ್ಥೆಯಾದ ಎಸ್‌ಎಸ್‌ಎಂ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಅಪೊಲೊ ಡಯಾಲಿಸಿಸ್ ಸಹಯೋಗದಲ್ಲಿ ಡಯಾಲಿಸಿಸ್ ಘಟಕವನ್ನು ಜ. 17ರ ಬುಧವಾರ ಆರಂಭಿಸಲಾಗುತ್ತಿದೆ ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವಿನಾಯಕ್ ಅವರು ತಿಳಿಸಿದರು.
ಅಪೊಲೊ ಡಯಾಲಿಸಿಸ್ ಕ್ಲಿನಿಕ್‌ಗಳು ದೇಶದಲ್ಲಿ ಮೊದಲ ಕೇಂದ್ರಗಳಾಗಿವೆ. ಪ್ರತಿ ರೋಗಿಗೆ 2200 ರೂ. ದರ ನಿಗದಿಪಡಿಸಿದ್ದು, ಮಲ್ಟಿಪಲ್ ಸೇವೆಗೆ 1300 ರಿಂದ 1400 ರೂ. ಪಡೆಯಲಾಗುವುದು. ಇದರಿಂದ ಜಿಲ್ಲೆಯ ರೋಗಿಗಳಿಗೆ ಅನುಕೂಲವಾಗಿದೆ. ಬುಧವಾರ ಬೆಳಿಗ್ಗೆ 9.30ಕ್ಕೆ ಶಾಸಕ ಹೆಚ್.ಪಿ.ಸ್ವರೂಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಐಎಂಎ ಅಧ್ಯಕ್ಷ ಡಾ.ದೇವದಾಸ್,ಡಾ.ಹರ್ಷ, ಇತರರು ಭಾಗವಹಿಸುವವರು ಎಂದರು ಸುದ್ದಿಗೋಷ್ಠಿಯಲ್ಲಿ ಅಪೊಲೊ ಡಯಾಲಿಸಿಸ್ ಸಿಇಒ ಮುತ್ತಣ್ಣ ಸುಧಾಕರ್, ಸತೀಶ್, ಮನಮೋಹನ್ ಇದ್ದರು.