ನಾಳೆ 2ನೇ ಹಂತದ ಚುನಾವಣೆ ತರಬೇತಿ

CTD 16 DC T. venktesh--00005
Published on

ಚಿತ್ರದುರ್ಗ:ಲೋಕಸಭಾ ಚುನಾವಣೆ ಅಂಗವಾಗಿ ಏ.20ರಂದು ಮತಗಟ್ಟೆ ಸಿಬ್ಬಂದಿಗೆ 2ನೇ ಹಂತದ ಚುನಾವಣೆ ತರಬೇತಿ ಆಯೋ ಜಿಸಲಾಗಿದೆ. ಈ ತರಬೇತಿಗೆ ಒಂದು ತಾಲೂಕು ಕೇಂದ್ರದಿಂದ,ಇನ್ನೊಂದು ತಾಲೂಕು ಕೇಂದ್ರಕ್ಕೆ ತೆರಳುವ ಮತಗಟ್ಟೆ ಸಿಬ್ಬಂದಿಗೆ 71 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ನಗರದ ಪ್ರವಾಸಿ ಮಂದಿರದ ಎದುರಿನ ಹಳೇ ಮಾಧ್ಯಮಿಕ ಶಾಲಾ ಆವರಣ, ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆ ಎಚ್‌ಪಿಪಿಸಿ ಸ ರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣ, ಹಿರಿಯೂರು ಹಾಗೂ ಹೊಳಲ್ಕೆರೆ ತಾಲೂಕು ಕಚೇರಿ ಆವರಣ,ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹೊಸದುರ್ಗ ತಾಯಮ್ಮ ಎಡೆತೊರೆ ಸಿದ್ದಿವಾಲ್ ಲಿಂಗಯ್ಯ ಪಪೂ ಕಾಲೇಜು ಆವರಣದಿಂದ ತರಬೇತಿಗೆ ಮುಂಜಾನೆ 6 ಗಂಟೆಗೆ ಬಸ್‌ಗಳು ಹೊರಡಲಿವೆ. ತರಬೇತಿ ಬಳಿಕ ಮರಳಿ ಸ್ವ ಸ್ಥಾನಕ್ಕೆ ಹಿಂತಿರುಗಲು ವಾಹನಗಳ ವ್ಯವಸ್ಥೆ ಇರುತ್ತದೆ.
ತರಬೇತಿಗೆ ಹೊರಡುವ ಬಸ್‌ಗಳ ಮಾರ್ಗ,ನಾಮಫಲಕಗಳ ನಿರ್ವಹಣೆಗಾಗಿ ಚಿತ್ರದುರ್ಗ ತಾಲೂಕಿಗೆ ಸಂಬಂಧಿಸಿದಂತೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ.ಎಂ.ಶಾನುಭಾಗ್(9972594412)ವಾಹನ ನಿರೀಕ್ಷಕ ರಾಜೇಶ್(9980323230),ಹಿರಿಯೂ ರು-ಹಿರಿಯ ಮೋಟಾರು ವಾಹನ ನಿರೀಕ್ಷಕ ಮಹಂತೇಶ್(7483627424),ಹೊಸದುರ್ಗ ಮತ್ತು ಹೊಳಲ್ಕೆರೆ-ಮೋಟಾರು ವಾಹನ ನಿರೀಕ್ಷಕ ಟಿ.ಎಂ.ಪ್ರಕಾಶ್(8217330331)ಹಾಗೂ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿಗಳಿಗೆ ಸಂಬಂಧಿಸಿದಂತೆ ಮೋಟಾರು ವಾಹನ ನಿರೀಕ್ಷಕ ಎಚ್.ಬಿ.ನದಾಫ್(9535554705)ಹಾಗೂ ಬಸ್ಸುಗಳು ನಿಯೋಜನೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲು ನಿಗಮದ ಚಿತ್ರದುರ್ಗ ವಿಭಾಗೀಯ ಸಂಚಲನಾಧಿಕಾರಿ ಜಿ.ಸುರೇಶ್(9606908962)ಅವರನ್ನು ನೇಮಿಸಲಾಗಿದೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net