ನಾಲ್ವರು ನಗರಸಭೆ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ

1-kollegalphoto-4,,,,
Published on

ಕೊಳ್ಳೇಗಾಲ: ನಗರಸಭೆ ಕಾರ್ಯಾಲಯದಲ್ಲಿ ಶನಿವಾರ ನಗರಸಭೆಯ ನೂತನ ನಾಮ ನಿರ್ದೇಶನ ಸದಸ್ಯರಾದ ಕೆ.ಎಂ.ನರಸಿಂಹನ್, ಜೆ.ದೇವಾನಂದ, ಪಿ.ಸ್ವಾಮಿನಂಜಪ್ಪ, ಹಾಗೂ ಬಿ.ಎನ್.ಶಿವಮಲ್ಲು ಅವರು ಪ್ರಮಾಣ ವಚನ ಸ್ವೀಕರಿಸಿದರು.

ನಗರಸಭಾಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರ ಉಪಸ್ಥಿತಿಯಲ್ಲಿ ನಗರಸಭೆ ಪೌರಾಯುಕ್ತ ಎ.ರಮೇಶ್ ಅವರು ನೂತನ ನಾಮ ನಿರ್ದೇಶನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ನೂತನ ನಾಮನಿರ್ದೇಶನ ಸದಸ್ಯರಿಗೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಹಾಗೂ ಮುಖಂಡರು, ಸಾರ್ವಜನಿಕರು ಅಭಿನಂದಿಸಿದರು.

ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ಮಾತನಾಡಿ, ನೂತನ ನಾಮ ನಿರ್ದೇಶನ ಸದಸ್ಯರಿಗೆ ನಮ್ಮೆಲ್ಲರ ಸಹಕಾರ ಇರಲಿದೆ. ಸಾರ್ವಜನಿಕರ ಕೆಲಸಗಳ ಮೇಲೆ ಹೆಚ್ಚು ಆಸಕ್ತಿ ವಹಿಸಿಕೊಂಡು ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಕೆಲಸ ಮಾಡುವಂತೆ ಸಲಹೆ ನೀಡಿದರು.

ನೂತನ ನಾಮನಿರ್ದೇಶನ ಸದಸ್ಯರು ಮಾತನಾಡಿ, ನಗರಸಭೆಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆ ಮಾಡಿರುವುದರಿಂದ ಜನರ ತೊಂದರೆಗಳಿಗೆ ಸ್ಪಂದಿಸಲು ಅವಕಾಶ ದೊರೆತಂತಾಗಿದೆ. ಈ ಮೂಲಕ ಕೈಲಾದಷ್ಟು ಸೇವೆ ಮಾಡುತ್ತೇವೆ ಎಂದರು.

ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರಾದ ಮನೋಹರ್, ಶಾಂತರಾಜು ಬಸ್ತೀಪುರ, ಪ್ರಕಾಶ್ ಶಂಕನಪುರ, ರಾಮಕೃಷ್ಣ, ಮಂಜುನಾಥ್, ಮಾಜಿ ಸದಸ್ಯ ಅಕ್ಮಲ್‌ಪಾಷ, ಮುಖಂಡರಾದ ಬಸ್ತೀಪುರ ರವಿ, ಸೋಮು, ರಮೇಶ್, ಜಗದೀಶ್, ಪ್ರಭುಸ್ವಾಮಿ, ನಗರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net