ನಾಲ್ವರು ಜೂಜುಕೋರರ ಬಂಧನ

Crime Logo
Published on

ಯಳಂದೂರು: ಪಟ್ಟಣದ ಬಳೇಪೇಟೆಯ ಐಸ್ ಕ್ರೀಂ ಫ್ಯಾಕ್ಟರಿ ರಸ್ತೆಯಲ್ಲಿರುವ ಬಸಪ್ಪನ ಗುಡಿ ಮುಂಭಾಗ ಜೂಜು ಅಡ್ಡೆ ಮೇಲೆ ಪೊಲೀಸರು ಬುಧವಾರ ಸಂಜೆ ದಾಳಿ ನಡೆಸಿ ನಾಲ್ವರು ಬಂಧಿಸಿದ್ದು, ನಗದು ಹಣ ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸಬ್‌ಇನ್ಸ್‌ಪೆಕ್ಟರ್ ಹನುಮಂತನಾಯಕ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ಪಟ್ಟಣದ ನಿವಾಸಿಗಳಾದ ಮಹೇಶ್‌ಕುಮಾರ್, ವೈ.ಎಂ. ಜಗದೀಶ್, ಮಹದೇವನಾಯಕ, ಕಾಂತರಾಜು ಎಂಬ ನಾಲ್ವರನ್ನು ಬಂಧಿಸಲಾಗಿದೆ. ಪಣಕ್ಕಿಟ್ಟಿದ್ದ 2050ರೂ. ಹಾಗೂ 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net