

ನಿಪ್ಪಾಣಿ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಗ್ರಾಮೀಣ ಪೊಲೀಸರು ಭಾನುವಾರ ನಾಲ್ವರು ಕಳ್ಳರನ್ನು ಬಂಧಿಸಿ, 24.60 ಲ ರೂ. ಮೌಲ್ಯದ 41 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕುರ್ಲಿ ಗ್ರಾಮದ ಯುವರಾಜ ಸಂಜಯ ಪವಾರ (35), ವಿನಾಯಕ ತಾನಾಜಿ ಕವಾಳೆ (28), ಹದ್ನಾಳ ಗ್ರಾಮದ ದಯಾನಂದ ಸಂಭಾಜಿ ಶೇಟಕೆ (36) ಮತ್ತು ತಾನಾಜಿ ಸಂಭಾಜಿ ಶೇಟಕೆ (39) ಬಂಧಿ-ತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ತಾಲೂಕಿನ ಸೌಂದಲಗಾ ಗ್ರಾಮದ ಸಾತಪ್ಪ ಶಾಮರಾವ ಕದಂ ಅವರು ಜು.28ರಂದು ವಾಹನ ಕಳುವಾಗಿದೆ ಎಂದು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 41ರ ಪೈಕಿ 24 ಬೈಕ್ ಕರ್ನಾಟಕದ್ದಾಗಿವೆ.
ಉಳಿದವು ಮಹಾರಾಷ್ಟ್ರದ್ದಾಗಿವೆ. ಎಸ್ಪಿ ಡಾ. ಸಂಜೀವ ಪಾಟೀಲ, ಅಪರ ಎಸ್ಪಿ ಮಹಾನಿಂಗ ನಂದಗಾವಿ, ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ ಮಾರ್ಗದರ್ಶನದಲ್ಲಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಪಿಎಸ್ಐ ಅನಿಲ ಕುಂಬಾರ, ಎಎಸೈ ಎಸ್.ಐ.ಕಂಬಾರ, ವಿ.ಎನ್.ಪಾಟೀಲ, ಸಿಬ್ಬಂದಿ ಎ.ಎಚ್.ಕಾಡಗೌಡರ, ವಿ.ಜಿ.ಮಾನೆ, ಬಿ.ಕೆ.ನಗಾರಿ, ಕೆ.ಡಿ.ಹಿರೇಮಠ, ಕೆ.ಎಲ್.ಚವರೆಡ್ಡಿ, ಎಸ್.ಎಸ್.ಹಿರೇಮಠ, ಎಂ.ಎ್. ನದ್ಾ, ಎ.ವಿ.ಚಂದನಶಿವ, ಪಿ.ಎಲ್.ಕುದರಿ, ಆರ್.ಎ್.ಗೌರಕ್ಕನವರ, ಎಸ್.ಟಿ.ಕಿವಡನ್ನವರ, ಪಿ.ಬಿ.ಸಿದ್ದಾಟಗಿಮಠ, ಎಸ್.ಪಿ.ಅಸೋದೆ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅವರು ಪ್ರಶಂಸನಾ ಪತ್ರ, ನಗದು ಬಹುಮಾನ ೂಷಿಸಿದ್ದಾರೆ.