ನಾಲ್ವರು ಕಳ್ಳರ ಬಂಧನ

17KWR3
Published on

ಅಂಕೋಲಾ: ಪಟ್ಟಣದ ಎಪಿಎಂಸಿ ಮೈದಾನ ಸಮೀಪ ಕೇಬಲ್ ನೆಟ್​ವರ್ಕ್ ಕಚೇರಿ ಹಾಗೂ ಮನೆಯಲ್ಲಿ ಕಳ್ಳತನ ಮಾಡಿದ್ದ ನಾಲ್ವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಗ್ಯಾರೇಜ್, ಗೌಂಡಿ, ಬಟ್ಟೆ ವ್ಯಾಪಾರ ಹೀಗೆ ವಿವಿಧ ಕೆಲಸ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನವನಗರದ ಇಮ್ರಾನ್ ಮಕ್ಬುಲ್ ಬ್ಯಾಡಗಿ (23), ಬಸವರಾಜ ನಾಗಪ್ಪ ವಡ್ಡರ (23), ಮಲ್ಲಿಕ್ ಅಬ್ದುಲ್ ರಜಾಕ್ ದೊಡ್ಮನಿ (19) ಹಾಲಿ ಮಡಗಾಂವ್​ನಲ್ಲಿ ವಾಸವಿರುವ ಬುಬಾರಕ್ ಅಬ್ದುಲ್ ಮುನಾಫ್ ಶೇಖ್ ಸನದಿ (21) ಬಂಧಿತರು. ಬಂಧಿತರಿಂದ 20,500 ರೂ., 50 ಸಾವಿರ ರೂ. ಬೆಲೆಯ ಎನ್​ಎಕ್ಸ್​ಟಿ ಫೈರ್ ಹೋಲ್ ಮಷಿನ್ ಹಾಗೂ ಒಂದು ಕಾರು ವಶಕ್ಕೆ ಪಡೆದಿದ್ದಾರೆ. ಪಿಐ ಕೃಷ್ಣಾನಂದ ನಾಯಕ ಮತ್ತು ಪಿಎಸ್​ಐ ಈ.ಸಿ. ಸಂಪತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net