ನಾಲ್ವರು ಆನೆ ದಂತ ಕಳ್ಳರ ಬಂಧನ

12-9
ಅಂತಾರಾಜ್ಯ ಕಳ್ಳರನ್ನು ಬಂಧಿಸಿದ ಸಾಂಗಲಿ ಪೊಲೀಸರು. ಸಾಂಗಲಿ ಎಸ್ಪಿ ದೀಕ್ಷಿತ ಗೇಡಂ, ಹೆಚ್ಚುವರಿ ಎಸ್ಪಿ ಮನಿಷಾ ಡುಬಲೆ, ಡಿವೈಎಸ್‌ಪಿ ರತ್ನಾಕರ ನವಲೆ ಇತರರು ಇದ್ದರು.
Published on

ಸಂಬರಗಿ, ಬೆಳಗಾವಿ: ಮಹಾರಾಷ್ಟ-ಕರ್ನಾಟಕ ಗಡಿಯಲ್ಲಿ ಆನೆ ದಂತಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಅಂತಾರಾಜ್ಯನಾಲ್ವರು ಕಳ್ಳ ಸಾಗಣಿಕೆದಾರರನ್ನು ಬಂಧಿಸಿದ್ದಾರೆ. ಕವಟೆಮಹಾಂಕಾಳ ಠಾಣೆಯ ವ್ಯಾಪ್ತಿಯ ಖರ್ಶೀಂಗನಲ್ಲಿ ಸಾಗಿಸುತ್ತಿದ್ದ 20ಲಕ್ಷ ರೂ.ಮೌಲ್ಯದ ಆನೆ ದಂತ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಕುರಿತು ಪೊಲೀಸರು ಅಥಣಿ ತಾಲೂಕಿನ ಪಾಂಡೆಗಾವ ಗ್ರಾಮದ ಹನುಮಂತ ವಾಗಮೊಡೆ ಹಾಗೂ ರಾಹುಲ ರಾಯಕರ, ಬಾಲಾಜಿ ಬನಸೋಡೆ, ಕಾಸೀಂ ಖಾಜಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಾಂಗಲಿ ಜಿಲ್ಲಾ ಎಸ್ಪಿ ದೀಕ್ಷಿತ ಗೇಡಂ ಹೆಚ್ಚುವರಿ ಎಸ್ಪಿ ಮನಿಷಾ ಡುಬಲೆ, ಜತ್ತ ಡಿವೈಎಸ್‌ಪಿ ರತ್ನಾಕರ ನವಲೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಜಿತೇಂದ್ರ ಶಹಾನೆ, ಪಿಎಸ್‌ಐ ಸಾಗರ ಗೂಡೆ ಇತರರು ಇದ್ದರು.ಅಂತಾರಾಜ್ಯ ಕಳ್ಳರನ್ನು ಬಂಧಿಸಿದ ಸಾಂಗಲಿ ಪೊಲೀಸರು. ಸಾಂಗಲಿ ಎಸ್ಪಿ ದೀಕ್ಷಿತ ಗೇಡಂ, ಹೆಚ್ಚುವರಿ ಎಸ್ಪಿ ಮನಿಷಾ ಡುಬಲೆ, ಡಿವೈಎಸ್‌ಪಿ ರತ್ನಾಕರ ನವಲೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net