ನಾಲ್ವರ ಸಾವು, 92 ಜನರಿಗೆ ಸೋಂಕು ದೃಢ

carona logo
Published on

ಗದಗ: ಜಿಲ್ಲೆಯಲ್ಲಿ ಶುಕ್ರವಾರ 92 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1381ಕ್ಕೆ ಏರಿದೆ. ಶುಕ್ರವಾರ 23 ಜನರು ಸೇರಿ ಒಟ್ಟು 491 ಜನರು ಗುಣವಾಗಿದ್ದಾರೆ. ಕೋವಿಡ್ ಸೋಂಕಿನಿಂದ ನಾಲ್ಕು ಜನರು ಮೃತಪಟ್ಟಿರುವ ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 32 ಜನರು ಮೃತಪಟ್ಟಿದ್ದಾರೆ.

ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಕಲ್ಯಾಣ ನಗರ, ಬೆಟಗೇರಿಯ ಕಿಲ್ಲಾ ಓಣಿ, ಶಹಪುರಪೇಟೆ, ತಾಜ್ ನಗರ, ವಿವೇಕಾನಂದ ನಗರ, ಶಿವಾನಂದ ನಗರ, ವೀರನಾರಾಯಣ ದೇವಸ್ಥಾನ ಹತ್ತಿರ, ಜಿಮ್ಸ್ ಬಾಲಕರ ವಸತಿ ಗೃಹ, ಮಹಾವೀರ ಕಾಲನಿ, ಎಸ್.ಎಂ.ಕೆ. ನಗರ, ಹುಡ್ಕೋ ಕಾಲನಿ, ಟ್ಯಾಗೋರ್ ರಸ್ತೆ, ಹೆಲ್ತ್ ಕ್ಯಾಂಪ್, ಶಿವಾಜಿ ನಗರ, ಕೆ.ಸಿ.ರಾಣಿ ರಸ್ತೆ, ಕೇಶವ ನಗರ, ಗದಗ ತಾಲೂಕಿನ ಹುಲಕೋಟಿ, ಕಣಗಿನಹಾಳ, ನಾಗಾವಿ ತಾಂಡಾ, ಬಿಂಕದಕಟ್ಟಿ, ಮುಳಗುಂದ, ಲಕ್ಕುಂಡಿ, ಹೊಂಬಳ,

ನರಗುಂದ ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ, ಕಸಬಾ ಓಣಿ, ಕಲಕೇರಿ ಓಣಿ, ನರಗುಂದ ತಾಲೂಕಿನ ಕೊಣ್ಣೂರ, ಸುರಕೋಡ, ಶಿರೋಳ,

ಶಿರಹಟ್ಟಿ ಪಟ್ಟಣದ ಪೊಲೀಸ್ ಸ್ಟೇಷನ್ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ಮಾರ್ಕೆರ್ಟ್ ಏರಿಯಾ, ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ, ಲಕ್ಷ್ಮೇಶ್ವರದ ಇಂದಿರಾ ನಗರ, ಬಸವೇಶ್ವರ ನಗರ, ಸೋಮೇಶ್ವರ ದೇವಸ್ಥಾನದ ಹತ್ತಿರ, ಶಿಗ್ಲಿ, ಖಾನಾಪುರ, ಲಕ್ಷ್ಮೇಶ್ವರದ ಬಸವೇಶ್ವರ ನಗರ, ಬಡ್ನಿ, ಕಡಕೋಳ

ರೋಣ ಪಟ್ಟಣದ ಕಲ್ಯಾಣ ನಗರ, ಹೊರಪೇಟೆ ಓಣಿ, ಶಿವಾನಂದ ನಗರ, ಶಾಂತಿ ನಗರ, ಗುರುಭವನ, ಶಿವಪೇಟೆ ಮುಖ್ಯ ರಸ್ತೆ, ರೋಣ ತಾಲೂಕಿನ ಬೇವಿನಕಟ್ಟಿ, ಹಿರೇಹಾಳ, ನಿಡಗುಂದಿ, ನರೇಗಲ್ ಹತ್ತಿರ, ಸೂಡಿ ರಸ್ತೆ,

ಮುಂಡರಗಿ ತಾಲೂಕಿನ ಜಾಲವಾಡಗಿ, ಹಿರೇವಡ್ಡಟ್ಟಿ, ಗಜೇಂದ್ರಗಡ ಪೊಲೀಸ್ ಕ್ವಾರ್ಟರ್ಸ್, ಹಳ್ಳಿಗುಡಿ ಗ್ರಾಮದಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ.

ಮೃತರ ವಿವರ: ಬೆಳಗಾವಿ ಶಿವಬಸವ ನಗರ ನಿವಾಸಿ 71 ವರ್ಷದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 21ರಂದು ಅವರಿಗೆ ಕೋವಿಡ್ -19 ದೃಢಪಟ್ಟಿತ್ತು. ಆದರೆ, ನ್ಯೂಮೋನಿಯಾ ಹಾಗೂ ಹೃದಯಾಘಾತದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಅವರು ಮೃತಪಟ್ಟಿದ್ದಾರೆ.

ರೋಣ ತಾಲೂಕು ನರೇಗಲ್ ನಿವಾಸಿ 70 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅಧಿಕ ರಕ್ತದೊತ್ತಡ ಹಾಗೂ ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ, ಅವರಿಗೆ ಜುಲೈ 17ರಂದು ಸೋಂಕು ಇರುವುದು ದೃಢಪಟ್ಟಿತ್ತು ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ.

ನರಗುಂದ ತಾಲೂಕಿನ ಸೋಮಾಪುರ ಗ್ರಾಮದ ನಿವಾಸಿ 54 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 25ರಂದು ಕೋವಿಡ್-19 ದೃಢಪಟ್ಟಿತ್ತು. ಅಧಿಕ ರಕ್ತದೊತ್ತಡ ಹಾಗೂ ನ್ಯೂಮೋನಿಯಾದಿಂದಾಗಿ ಗುರುವಾರ ಮೃತಪಟ್ಟಿದ್ದಾರೆ.

ಗದಗ ನಗರದ ಡಿ.ಸಿ. ಮಿಲ್ ನಿವಾಸಿ 53 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 7ರಂದು ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ನ್ಯೂಮೋನಿಯಾ ಹಾಗೂ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net