

ಮೈಸೂರು: ನಗರದ ಹದಯಭಾಗದಲ್ಲಿರುವ ಕೆ.ಆರ್. ವೃತ್ತದಲ್ಲಿರುವ ನಾಲ್ವಡಿ ಕಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಏರಿದ ಅನಾಮಿಕ ವ್ಯಕ್ತಿಯೊಬ್ಬ ಅರ್ಧ ಗಂಟೆಗೂ ಅಧಿಕ ಕಾಲ ಅಲ್ಲೇ ಕುಳಿತು ಅನುಚಿತವಾಗಿ ವರ್ತಿಸಿದ್ದಾನೆ.
ಶುಕ್ರವಾರ ಸಂಜೆ 4ರ ಸುವಾರಿಗೆ ವ್ಯಕ್ತಿಯು ಪ್ರತಿಮೆ ಏರಿ ನಿದ್ರಿಸುವ ಭಂಗಿಯಲ್ಲಿ ಕುಳಿತುಕೊಂಡಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ ಆತ ಇಳಿಯಲಿಲ್ಲ. ಕೆಲವರು ವಿಡಿಯೋ ವಾಡಿ ಸಾವಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅಲ್ಲದೇ ಪೊಲೀಸರಿಗೆ ವಾಹಿತಿ ನೀಡಿದ್ದಾರೆ. ದೇವರಾಜ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸರನ್ನುಕಂಡ ಕೂಡಲೇ ಆತ ಕೆಳಕ್ಕೆ ಧುಮುಕಿ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ನಗರದ ಪ್ರಮುಖ ವತ್ತದಲ್ಲಿರುವ ನಾಲ್ವಡಿ ಅವರ ಪ್ರತಿಮೆಗಳಿಗೆ ಭದ್ರತೆ ಇಲ್ಲದಿರುವ ಕುರಿತು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.