ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಶಿಕ್ಷಣಕ್ಕೆ ಹೆಚ್ಚಿನ ಒತ್ತು

f504c8a4-3128-404b-8ffd-28cfd58ab30d--0006
Published on

ಚಿತ್ರದುರ್ಗ:ಶಿಕ್ಷಣವೇ ಶಕ್ತಿ ಎಂಬ ಮಾತಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಕ್ತಿ ತುಂಬಿದ್ದರೆಂದು ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಶಾಂ ತವೀರ ಸ್ವಾಮೀಜಿ ಹೇಳಿದರು. ನಗರದ ಭೋವಿ ಗುರುಪೀಠದಲ್ಲಿ ಬುಧವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾ ರ‌್ಯ ಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು,ಅಸ್ಪಶ್ಯರ ಶಿಕ್ಷಣಕ್ಕೆ ಒಡೆಯರ್ ಅವಕಾಶ ಕಲ್ಪಿಸಿದರು.
ಶಿಕ್ಷಣವೇ ಎಲ್ಲರ ಅಭಿವೃದ್ಧಿಗೆ ಮೂಲ ಎಂದು ಭಾವಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟಿದ್ದರು. ಮೈಸೂರು ವಿವಿ,ಬೆಂಗಳೂರು ಕೃಷಿ ವಿವಿ ಸ್ಥಾಪಿಸಿ ದರು. ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಿಸಿದರು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯ್ದೆ ಜಾರಿಗೊಳಿಸಿದ್ದರು. ಪ್ರಜಾಪ್ರತಿನಿಧಿ ಸಭೆ ಬಲಗೊಳಿಸಿ,ನ್ಯಾಯವಿಧಾಯಕ ಸಭೆ ಸ್ಥಾಪಿಸಿದರು. ಮಹಾರಾಜರು ಸಾಮಾಜಿಕ ನ್ಯಾಯದ ಪರವಾಗಿದ್ದರು. ಮಿಲ್ಲರ್ ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ ಶೇ.75 ಮೀಸಲು ನೀಡಿದ್ದರು ಒಡೆಯರ್ ಅವರ ಹತ್ತು ಹಲವು ಜನರ ಯೋಜನೆಗಳ ಕುರಿತು ಶ್ರೀಗಳು ವಿವರಿಸಿದರು.
ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ,ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಒಡೆಯರ್ ಅವರ ಕೊಡುಗೆ ವಿವಿಧ ಕ್ಷೇತ್ರಗಳಿಗೆ ಇದೆ ಎಂದರು. ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಮಾತನಾಡಿ ಒಡೆಯರ್ ಅವರು ಹಿಂದೂಸ್ತಾನಿ,ಕರ್ನಾಟಕ ಮತ್ತು ಪಾಶ್ಚಿಮಾತ್ಯ ಸಂಗೀತ ಕಲಾವಿದರನ್ನು ಪ್ರೋತ್ಸಾಹಿದ್ದರೆಂದರು.
ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ,ಒಡೆಯರ್ ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು. ಯಾದವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ರೂಪಿಸಿದ ಕೀರ್ತಿ ಒಡೆಯರ್‌ಗೆ ಸೇರುತ್ತದೆ ಎಂದರು.
ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ಈಡಿಗ ಗುರುಪೀಠದ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ,ಮೇದಾರ ಗುರುಪೀಠದ ಶ್ರೀ ಇ ಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ,ಕುಂಬಾರ ಗುರುಪೀಠದ ಜಗದ್ಗುರು ಶ್ರೀ ಬಸವ ಗುಂಡಯ್ಯ ಸ್ವಾಮೀಜಿ,ಶಿವಮೊಗ್ಗದ ಶ್ರೀ ಬಸವ ಮ ರುಳಸಿದ್ಧ ಸ್ವಾಮೀಜಿ,ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ,ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಸಿರಗುಪ್ಪದ ಶ್ರೀ ಬಸವ ಭೂ ಷಣ ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮೀಜಿ, ನೆಲಮಂಗಲದ ಶ್ರೀ ಡಾ.ರಮಾನಂದ ಸ್ವಾಮೀಜಿ, ತುಮಕೂರಿನ ಶ್ರೀ ತಿಪ್ಪೇ ರುದ್ರ ಸ್ವಾಮೀಜಿ,ಬೆಳಗಾವಿಯ ಶ್ರೀ ಜಯದೇವ ಸ್ವಾಮೀಜಿ ಉಪಸ್ಥಿತರಿದ್ದರು. ಕಾರ‌್ಯಕ್ರಮದಲ್ಲಿ ಹಾಜರಿದ್ದ ಶ್ರೀಗಳು ಮಡಿವಾಳ ಶ್ರೀಗಳಿಗೆ 40ನೇ ಜನ್ಮದಿನೋತ್ಸವದ ಶುಭ ಕೋರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net