ನಾಲ್ಕು ಸಾವಿರ ರೂ. ಕೊಟ್ಟು ಹೆಚ್ಚು ಹಣ ವಸೂಲಿ

31 KAMPLI 01
Published on

ಕಂಪ್ಲಿ: ರಸಗೊಬ್ಬರದ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಲಾಯಿತು.

ಕ್ಷೇತ್ರ ಅಧ್ಯಕ್ಷ ರಿಯಾಜ್ ಅಹಮದ್ ಮಾತನಾಡಿ, ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆ ಮಾಡುವುದರೊಂದಿಗೆ ಅಭಾವವನ್ನೂ ಸೃಷ್ಟಿಸಿ ರೈತರ ಮೇಲೆ ಗದಾಪ್ರಹಾರ ಮಾಡಿದೆ. 15:15:15 ರಸಗೊಬ್ಬರದ ಬೆಲೆಯನ್ನು 1250 ರೂಪಾಯಿಯಿಂದ 1650 ರೂಪಾಯಿಗೆ, ಆರ್.ಸಿ.ಎಫ್. 15:15:15 ರಸಗೊಬ್ಬರದ ಬೆಲೆಯನ್ನು 1470 ರೂಪಾಯಿಯಿಂದ 1650 ರೂಪಾಯಿಗೆ, ಇಫ್ಕೋ 10:26:26 ಬೆಲೆಯನ್ನು 1470 ರೂಪಾಯಿಯಿಂದ 1725 ರೂಪಾಯಿಗೆ ಏರಿಕೆ ಮಾಡಿದೆ. ರೈತರಿಗೆ ವರ್ಷಕ್ಕೆ ನಾಲ್ಕು ಸಾವಿರ ರೂ. ಕಿಸಾನ್ ಸಮ್ಮಾನ್ ಹಣ ನೀಡಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳ ಬೆಲೆ ಏರಿಸಿ ರೈತರಿಂದ ಹೆಚ್ಚಿನ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಪ್ರಮುಖರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಉಸ್ಮಾನ್ ಮೊದಲಾದವರು ಮಾತನಾಡಿ ಉದ್ದೇಶಪೂರ್ವಕ ರಸಗೊಬ್ಬರ ನೀಡದೆ ರಾಜ್ಯದ ರೈತರನ್ನು ವಂಚಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದರು, ನಾಯಕರು ಧ್ವನಿ ಎತ್ತಲಿ ಎಂದು ಆಗ್ರಹಿಸಿದರು.

ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ರೀಗುರು, ಜಿಲ್ಲಾಧ್ಯಕ್ಷ ಎನ್.ಕೆ.ಎಸ್.ಮಂಜುನಾಥ, ಪ್ರಮುಖರಾದ ವಿ.ಬಿ.ನಾಗರಾಜ, ಬಿ.ರಾಕೇಶ್, ಸಿ.ಎನ್.ಆದಿಲ್, ಗೋಪಿನಾಥ್, ವಿ.ಎಸ್.ರಾಘವೇಂದ್ರ, ಅಮೀರ್, ಸಂತೋಷ್, ಯು.ಖಾಜಾವಲಿ, ಸಿ.ಆರ್.ಹನುಮಂತ, ವೀರಾಂಜನೇಯಲು, ವಾಲ್ಮೀಕಿ ರಘು, ಬಿ.ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net