ನಾಲ್ಕು ಶತಕ ದಾಟಿದ ಮಹಾಮಾರಿ

carona logo
Published on

ಗದಗ: ಜಿಲ್ಲೆಯಲ್ಲಿ ಗುರುವಾರ 44 ಜನರಿಗೆ ಕೋವಿಡ್-19 ದೃಢಪಟ್ಟಿದ್ದು, ಆ ಮೂಲಕ ನಾಲ್ಕು ಶತಕದ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 413ಕ್ಕೇರಿದೆ.

ಗುರುವಾರ ಶಿರಹಟ್ಟಿ ತಾಲೂಕಿನ ರಣತೂರ ಗ್ರಾಮದ ನಿವಾಸಿ 65 ವರ್ಷದ ಪುರುಷ, ಗದಗ-ಬೆಟಗೇರಿ ಕೇಶವ ನಗರ ಪಟ್ಟಣಶೆಟ್ಟಿ ಬಡಾವಣೆ ನಿವಾಸಿ 41 ವರ್ಷದ ಪುರುಷ, 20 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಬೆಟಗೇರಿ ಹೆಲ್ತ್ ಕ್ಯಾಂಪ್ ಪೊಲೀಸ್ ವಸತಿ ಗೃಹ ನಿವಾಸಿ 48 ವರ್ಷದ ಪುರುಷ, ಗದಗ ಪಂಚಾಕ್ಷರಿ ನಗರ ನಿವಾಸಿ 54 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಗದಗ ಅಬ್ಬಿಗೇರಿ ಕಾಂಪೌಂಡ್ ನಿವಾಸಿ 40 ವರ್ಷದ ಪುರುಷ, ಗದಗ ಕೆ.ಸಿ. ರಾಣಿ ರಸ್ತೆ ನಿವಾಸಿ 32 ವರ್ಷದ ಮಹಿಳೆ, ಜಿಮ್್ಸ ಹಾಸ್ಟೆಲ್ ನಿವಾಸಿ 23 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.

ಗದಗ ದಾಸರ ಓಣಿಯ 27 ವರ್ಷದ ಮಹಿಳೆ, 21 ವರ್ಷದ ಪುರುಷ, 12 ವರ್ಷದ ಪುರುಷ ಹಾಗೂ 36 ವರ್ಷದ ಪುರುಷನಿಗೆ ಅದೇ ಓಣಿ (ಪಿ-35077) ಸೋಂಕಿತರ ಸಂಪರ್ಕದಿಂದಾಗಿ ವೈರಸ್ ಖಚಿತಪಟ್ಟಿದೆ. ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ನಿವಾಸಿ 49 ವರ್ಷದ ಪುರುಷ, ಗದಗ ನಗರದ ಪಂಚಾಕ್ಷರಿ ನಗರದ ಎರಡನೇ ತಿರುವಿನ ನಿವಾಸಿ 63 ವರ್ಷದ ಮಹಿಳೆಗೆ ವೈರಸ್ ಬಂದಿದೆ.

ಗಜೇಂದ್ರಗಡದ ಲಿಂಗರಾಜ ನಗರದ ನಿವಾಸಿ (ಪಿ-35054) ಸಂಪರ್ಕದಿಂದಾಗಿ 46 ವರ್ಷದ ಪುರುಷ, 11 ವರ್ಷದ ಬಾಲಕ, 6 ವರ್ಷದ ಬಾಲಕಿ, 16 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿದೆ. ರೋಣ ತಾಲೂಕಿನ ಬೆಳವಣಕಿ ಗ್ರಾಮದ ಜನತಾ ಪ್ಲಾಟ್ ನಿವಾಸಿ, ಗಜೇಂದ್ರಗಡದ ತಗರಗಲ್ಲಿ ಹತ್ತಿರದ ನಿವಾಸಿ 7 ವರ್ಷದ ಬಾಲಕ, ಬಾಲಕಿಗೆ (ಪಿ-35054) ಸೋಂಕು ಬಂದಿದೆ.

ಗದಗ ತಾಲೂಕು ಕಬಲಾಯತಕಟ್ಟಿ ತಾಂಡಾ ನಿವಾಸಿ 55 ವರ್ಷದ ಮಹಿಳೆಗೆ (ಪಿ-44849) ಸೋಂಕಿತರ ಸಂಪರ್ಕ, ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿವಾಸಿ 35 ವರ್ಷದ ಪುರುಷನಿಗೆ (ಪಿ-35075) ಸೋಂಕಿತರ ಸಂಪರ್ಕದಿಂದಾಗಿ ದೃಢಪಟ್ಟಿದೆ. ರೋಣ ತಾಲೂಕಿನ ಹುಲ್ಲೂರ ಗ್ರಾಮದ ಸ್ವಾಮಿ ವಿವೇಕಾನಂದ ನಗರದ ನಿವಾಸಿ 33 ವರ್ಷದ ಪುರುಷನಿಗೆ ದೃಢಪಟ್ಟಿದೆ. ಗಜೇಂದ್ರಗಡ ನಿವಾಸಿಗಳಾದ 20, 28 ಹಾಗೂ 20 ವರ್ಷದ ಮಹಿಳೆಗೆ (ಪಿ-35054) ಸೋಂಕಿತರ ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ರೋಣ ತಾಲೂಕು ಹೊಳೆಮಣ್ಣೂರ ಗ್ರಾಮದ ದುರ್ಗಮ್ಮ ದೇವಸ್ಥಾನ ಹತ್ತಿರದ ನಿವಾಸಿ 65 ವರ್ಷದ ಪುರುಷ, ಹೊಳೆಆಲೂರ ಗ್ರಾಮದ ರೈಲು ನಿಲ್ದಾಣದ ಹತ್ತಿರದ ನಿವಾಸಿ 45 ವರ್ಷದ ಪುರುಷನಿಗೆ ವೈರಸ್ ತಗುಲಿದೆ. ಯಾವಗಲ್ಲ ಗ್ರಾಮದ ಭರಮಲಿಂಗೇಶ್ವರ ಗುಡಿ ಹತ್ತಿರದ ನಿವಾಸಿ 60 ವರ್ಷದ ಮಹಿಳೆಗೆ (ಪಿ-35075) ಸಂಪರ್ಕದಿಂದಾಗಿ ಸೋಂಕು ದೃಢಪಟ್ಟಿದೆ.

ಗಜೇಂದ್ರಗಡದ ತಗರಗಲ್ಲಿ ಹತ್ತಿರದ ನಿವಾಸಿ 3 ವರ್ಷದ ಬಾಲಕಿ (ಪಿ-35055) ಸೋಂಕಿತರ ಸಂಪರ್ಕದಿಂದ, ಗಜೇಂದ್ರಗಡದ ಕುಷ್ಟಗಿ ರಸ್ತೆ ಸಾಯಿ ದತ್ತ ಆಸ್ಪತ್ರೆಯ ನಿವಾಸಿ 41 ವರ್ಷದ ಪುರುಷನಿಗೆ (ಪಿ-35054) ಸೋಂಕಿತರ ಸಂಪರ್ಕದಿಂದಾಗಿ ವೈರಾಣು ತಗುಲಿದೆ. ಲಕ್ಕಲಕಟ್ಟಿ ಗ್ರಾಮದ 2 ನೇ ವಾರ್ಡ್ ನಿವಾಸಿ 28 ವರ್ಷದ ಮಹಿಳೆಗೆ (ಪಿ-35084) ಸೋಂಕಿತರ ಸಂಪರ್ಕದಿಂದ, ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ನಿವಾಸಿ 38 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಗದಗನ ಕಾರಂತರ ಸ್ಕಾ್ಯನ್ ಸೆಂಟರ್ ಎದುರಿಗಿನ ನಿವಾಸಿ 59 ವರ್ಷದ ಮಹಿಳೆಗೆ (ಪಿ-35066) ಸೋಂಕಿತರ ಸಂಪರ್ಕದಿಂದ, ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ನಿವಾಸಿ 28 ವರ್ಷದ ಮಹಿಳೆಗೆ, 37ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಗದಗ ಬಸವೇಶ್ವರ ನಗರ ನಿವಾಸಿ 26 ವರ್ಷದ ಪುರುಷನಿಗೆ (ಪಿ-36570) ಸೋಂಕಿತರ ಸಂಪರ್ಕ, ಗದಗ ಬಸವೇಶ್ವರ ನಗರದ ನಿವಾಸಿ 57 ವರ್ಷದ ಪುರುಷನಿಗೆ (ಪಿ-36570) ಸೋಂಕಿತರ ಸಂಪರ್ಕ, ಗದಗ ತಾಲೂಕಿನ ಮುಳಗುಂದ ಗ್ರಾಮದ ನಿವಾಸಿ 40 ವರ್ಷದ ಪುರುಷನಿಗೆ (ಪಿ-36463) ಸೋಂಕಿತರ ಸಂಪರ್ಕದಿಂದಾಗಿ ಖಚಿತವಾಗಿದೆ.

ಗದಗ ಬಸವೇಶ್ವರ ನಗರ ನಿವಾಸಿಗಳಾದ 27 ವರ್ಷದ ಮಹಿಳೆ, 4 ವರ್ಷದ ಬಾಲಕ, 3 ವರ್ಷದ ಬಾಲಕಿಗೆ (ಪಿ-31106) ಸೋಂಕಿತರ ಸಂಪರ್ಕ, ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ನಿವಾಸಿ 53 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದ್ದಾರೆ.

ಕರೊನಾ ಅಂಶಗಳು

44: ಇಂದಿನ ಸೋಂಕಿತರು

13724: ನಿಗಾದಲ್ಲಿ ಇರುವವರು:

14385: ಮಂದಿಯ ಗಂಟಲ್ ದ್ರವ ಸಂಗ್ರಹ

480: ಏಳು ದಿನ ಕ್ವಾರಂಟೈನ್ ನಲ್ಲಿರುವವರು:

194: ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರುವವರು:

413: ಪಾಸಿಟಿವ್ ಪ್ರಕರಣಗಳು

210: ಗುಣವಾಗಿ ಬಿಡುಗಡೆಯಾದವರು:

194: ಸಕ್ರಿಯ ಪ್ರಕರಣಗಳು

626: ಬಾಕಿ ಇರುವ ವರದಿಗಳು:

13317: ನೆಗೆಟಿವ್ ಮಾದರಿಗಳು

9 : ಮೃತರು

ಬೆಟಗೇರಿ ಪೊಲೀಸ್ ಠಾಣೆ ಸೀಲ್​ಡೌನ್

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಹೆಚ್ಚಾಗತೊಡಗಿದ್ದು, ಕರೊನಾ ಅಬ್ಬರ ಮುಂದುವರಿದಿದೆ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪೊಲೀಸರಿಗೂ ಸೋಂಕು ತಗುಲಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಗದಗ ಶಹರ ಠಾಣೆಯ ಪೇದೆಯೊಬ್ಬರಿಗೆ ಸೋಂಕು ವಕ್ಕರಿಸಿದ್ದರಿಂದ ಬುಧವಾರ ಠಾಣೆಯನ್ನೇ ಸೀಲ್​ಡೌನ್ ಮಾಡಲಾಗಿತ್ತು. ಬೆಟಗೇರಿ ಠಾಣೆಯ ಇಬ್ಬರು ಪೇದೆಗಳಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಹೀಗಾಗಿ ಗುರುವಾರ ಬೆಟಗೇರಿ ಠಾಣೆಯನ್ನೂ ಸೀಲ್​ಡೌನ್ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಒಟ್ಟು ಆರು ಪೊಲೀಸ್ ಪೇದೆಗಳಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದರಿಂದ ನಿತ್ಯ 10 ಮಂದಿ ಪೇದೆಗಳ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರುದ್ರಮುನಿ ಸ್ವಾಮಿ ಶ್ರೀಮಠಕ್ಕೆ ಪ್ರವೇಶ ನಿರ್ಬಂಧ

ನರಗುಂದ: ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ತಾಲೂಕಿನ ಸುಕ್ಷೇತ್ರ ಬನಹಟ್ಟಿ ಗ್ರಾಮದ ಶ್ರೀಮದ್ ಜಗದ್ಗುರು ನಿರಂಜನ ರುದ್ರಮುನಿ ಸ್ವಾಮೀಜಿ ಶ್ರೀಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಶ್ರೀಮಠದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅನ್ನ ದಾಸೋಹವನ್ನು ಸರ್ಕಾರದ ಆದೇಶದಂತೆ ಕಳೆದ ಮಾರ್ಚ್​ನಿಂದ ಸ್ಥಗಿತಗೊಳಿಸಲಾಗಿದೆ. ಅದರಂತೆಯೇ ಪ್ರಸಕ್ತ ವರ್ಷ ಶ್ರಾವಣ ಮಾಸದ ನಿಮಿತ್ತ ಶ್ರೀಮಠದಲ್ಲಿ ಮಂಗಳವಾರದಿಂದ ಆರಂಭಗೊಳ್ಳಬೇಕಿದ್ದ ಪುರಾಣ-ಪ್ರವಚನ, ವಿಶೇಷ ಪೂಜೆ, ಪುನಸ್ಕಾರಗಳನ್ನು ಕೈಬಿಡಲಾಗಿದೆ. ಆದ್ದರಿಂದ ಶ್ರೀಮಠದ ಭಕ್ತಾದಿಗಳು ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ವೇದಮೂರ್ತಿ ರುದ್ರಯ್ಯ ಹಿರೇಮಠ ಪ್ರಕಟಣೆಯಲ್ಲಿ ಕೋರಿದ್ದಾರೆ.

ನಂದಿವೇರಿಮಠದ ಜಾತ್ರೆ ರದ್ದು

ಮುಂಡರಗಿ: ತಾಲೂಕಿನ ಡೋಣಿ ಗ್ರಾಮದ ನಂದಿವೇರಿ ಮಠದ ಜಾತ್ರೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ. ಜಾತ್ರೆ ರದ್ದಾಗಿದ್ದರೂ ಕೆಲವರು ಭಕ್ತರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಭಕ್ತರು ಎಚ್ಚರ ವಹಿಸಬೇಕು. ದೇಣಿಗೆ ಕೊಡಲು ಇಚ್ಛಿಸುವವರು ಡೋಣಿ ಗ್ರಾಮದ ಪಂಚರ ಮೂಲಕ ನೀಡಿ ರಸೀದಿ ಪಡೆಯಬೇಕು ಎಂದು ಗ್ರಾಮದ ಹಿರಿಯರಾದ ಎಂ.ಪಿ.ದ್ರೋಣಗಿರಿ ತಿಳಿಸಿದ್ದಾರೆ.

ಲಕ್ಷ್ಮೇಶ್ವರ , ಶಿಗ್ಲಿಯಲ್ಲಿ ಸೀಲ್​ಡೌನ್

ಲಕ್ಷ್ಮೇಶ್ವರ: ತಹಸೀಲ್ದಾರರ ಸೂಚನೆ ಮೇರೆಗೆ ಪಟ್ಟಣದ ಹಳೇ ಬಸ್ ನಿಲ್ದಾಣದ ರಸ್ತೆ, ಸರಾಫ್ ಬಜಾರ್, ಅಂಬಾ ಭವಾನಿ ದೇವಸ್ಥಾನ ರಸ್ತೆ ಸುತ್ತಲಿನ ಪ್ರದೇಶ ಸೀಲ್​ಡೌನ್ ಮಾಡಲಾಗಿದೆ. ಅಲ್ಲದೆ, ಈಗಾಗಲೇ ಸೋಂಕು ದೃಢಪಟ್ಟಿರುವ ಶಿಗ್ಲಿ ಗ್ರಾಮದಲ್ಲಿ ಕೆಲವು ಪ್ರದೇಶಗಳನ್ನು ಗ್ರಾಪಂ ಸಿಬ್ಬಂದಿ ಸೀಲ್​ಡೌನ್ ಮಾಡಿದ್ದಾರೆ.

ಗುರುವಾರ ತಾಲೂಕು ವ್ಯಾಪ್ತಿಯಲ್ಲಿ 11 ಜನರ ಕರೊನಾ ವೈರಸ್ ಶಂಕಿತ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಶಂಕಿತ ಸೋಂಕಿತರು ವಾಸಿಸುವ ಪ್ರದೇಶಗಳನ್ನು ಸೀಲ್​ಡೌನ್ ಮಾಡಲಾಗಿದೆ. ಅವರ ಪ್ರಥಮ ಸಂಪರ್ಕದಲ್ಲಿರುವ 15 ಮತ್ತು ದ್ವಿತೀಯ ಸಂಪರ್ಕದಲ್ಲಿರುವ 19 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಇವರೆಲ್ಲರಿಗೂ ಆರೋಗ್ಯ ಚಿಕಿತ್ಸೆಗೊಳಪಡಿಸಿ ವರದಿ ನೆಗೆಟಿವ್ ಬಂದರೆ ಮನೆಯಲ್ಲಿ ಕ್ವಾರಂಟೈನ್​ಗೆ ಸೂಚಿಸಲಾಗುವುದು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಗೊಜನೂರ, ಒಡೆಯರ ಮಲ್ಲಾಪುರ, ಶಿಗ್ಲಿ, ಲಕ್ಷ್ಮೇಶ್ವರದಲ್ಲಿನ ಹಾಸ್ಟೇಲ್​ಗಳಲ್ಲಿ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದೆ. ಸೀಲ್​ಡೌನ್ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.

ಲಕ್ಷ್ಮೇಶ್ವರ ಸಾರಿಗೆ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಡಕ್ಟರ್​ನ ಸಂಪರ್ಕದ 15 ಸಿಬ್ಬಂದಿಗೆ ರಜೆ ನೀಡಿ ಹೋಂ ಕ್ವಾರಂಟೈನ್​ಗೆ ಸೂಚಿಸಲಾಗಿದೆ. ಘಟಕದಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ರಜೆ ನೀಡಲಾಗಿದೆ. ಅಲ್ಲದೆ, ಆರೋಗ್ಯದಲ್ಲಿ ವ್ಯತ್ಯಾಸ, ತೊಂದರೆ ಕಂಡು ಬಂದವರು ರಜೆ ನೀಡಲಾಗುತ್ತಿದೆ. ಹುಬ್ಬಳ್ಳಿ ಲಾಕ್​ಡೌನ್ ಘೊಷಣೆಯಾಗಿದ್ದರಿಂದ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಏರುಪೇರಾಗಿದ್ದರಿಂದ ಕೇವಲ 20 ಬಸ್ಸುಗಳು ಕಾರ್ಯಾಚರಿಸುತ್ತಿವೆ. | ಶೇಖರ ನಾಯಕ, ಸಾರಿಗೆ ಘಟಕ ವ್ಯವಸ್ಥಾಪಕ ಲಕ್ಷ್ಮೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net