

ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಬುಧವಾರ ಇ-ರಕ್ಷಾ ಸ್ಪರ್ಧೆ 2023 ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗ ಳು, ಪಾಲಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರೆ ಭಾಗೀದಾರರಲ್ಲಿ ಸೈಬರ್ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಇಐಉ,ಘೆಇಉ್ಕ ಹಾಗೂ ಇಚಿಛ್ಟಿ ಛಿಚ್ಚಛಿ ್ಛಟ್ಠ್ಞಠಿಜಿಟ್ಞ ಸಹಯೋಗದಲ್ಲಿ ಇ-ರಕ್ಷಾ ಸ್ಪರ್ಧೆ ಆಯೋಜಿಸಲಾಗಿದೆ. ಆ.31ರೊಳಗೆ ಹೆಸರು ನೋಂದಾಯಿಸ ಬಹುದಾಗಿದೆ ಎಂದರು.
ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ, ವಿದ್ಯಾರ್ಥಿಗಳ ವಿಭಾಗ (3ನೇ ತರಗತಿಯಿಂದ ಕಾಲೇಜು ಹಂತ) ಶಿಕ್ಷಕರು, ಪಾಲಕರು, ಶೈಕ್ಷಣಿಕ ಸಂಸ್ಥೆಗಳು, ಈ ನಾಲ್ಕು ವಿಭಾಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು.
ಒಬ್ಬ ಸ್ಪರ್ಧಿ ಒಂದು ವಿಭಾಗದಿಂದ ಇ-ರಕ್ಷಾ ವೆಬ್‌ಸೈಟ್‌ನ ಡಿಜಿಟಲ್ ನಮೂನೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಬಿಆರ್‌ಸಿ ಕಚೇರಿ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
)))) ಎಂ.ನಾಸಿರುದ್ದೀನ್