ನಾಲ್ಕು ಮತಗಟ್ಟೆಗಳ ವಿವಿ ಪ್ಯಾಟ್ ಚೀಟಿಗಳ ಎಣಿಕೆ

e2c2b003-f02d-4a44-b1a4-b5b6206ddcf0--00004
Published on


ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಚುನಾವಣೆ ಮತ ಎಣಿಕೆ ಕೇಂದ್ರದಲ್ಲಿದ್ದ ಶಿರಾ ವಿಧಾನಸಭಾ ಕ್ಷೇತ್ರದ ಇವಿಎಂಗಳಿದ್ದ ಭದ್ರತಾ ಕೊಠಡಿಯ ಬೀಗ ತರುವುದನ್ನು ಅಧಿಕಾರಿಯೊಬ್ಬರು ಮರೆತ ಕಾರಣಕ್ಕೆ ಆ ಕೊಠಡಿ ತೆರೆಯುವುದು ವಿಳಂಬವಾಯಿತು.
ಭದ್ರತಾ ಕೊಠಡಿಗಳಿಗೆ ಹಾಕಿದ್ದ ಇಂಟರ್‌ಲಾಕ್ ಹಾಗೂ ದುಂಡು ಬೀಗದ ಕೈಗಳ 2 ಸೆಟ್‌ಗಳಲ್ಲಿ ಒಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮತ್ತೊಂದು ಆಯಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿಗಳ ಬಳಿ ಇರುತ್ತದೆ ಎಂದು ಮೂಲಗಳು ತಿಳಿಸಿವೆ.
ಡಿಸಿ ಟಿ.ವೆಂಕಟೇಶ್ ಅವರ ಬಳಿ ಇದ್ದ ಹಲವು ಬೀಗದ ಕೈಗಳನ್ನು ಹುಡುಕಿ ಕೊಠಡಿ ತೆರೆಯಲು ಪ್ರಯತ್ನ ನಡೆದಿತ್ತು. ಕೊನೆಗೆ ಶಿರಾದ ಅಧಿಕಾರಿಗಳು ಬೀಗ ಕೈ ತಂದ ಬಳಿಕ ಹಿರಿಯ ಅಧಿಕಾರಿಗಳು ನಿಟ್ಟಿಸಿರು ಬಿಟ್ಟರು.
ಇನ್ನು ಫಲಿತಾಂಶ ಘೋಷಣೆ ಹಂತ ತಲುಪಿದ್ದ ವೇಳೆ ಶಿರಾ ವಿಧಾನಸಭಾ ಕ್ಷೇತ್ರದ ಎರಡು,ಚಿತ್ರದುರ್ಗ -1 ಹಾಗೂ ಚಳ್ಳಕೆರೆ ವಿಧಾ ನ ಸಭಾ ಕ್ಷೇತ್ರದ ಒಂದು ಮತಗಟ್ಟೆಯ ಕಂಟ್ರೋಲ್‌ಯೂನಿಟ್‌ಗಳಲ್ಲಿ ತಾಂತ್ರಿಕ ದೋಷದಿಂದ ಮತಗಳನ್ನು ಎಣಿಸಲಾಗದೆ,ಆ ಮತ ಗಟ್ಟೆಗಳಿಗೆ ಸೇರಿದ್ದ ವಿವಿ ಪ್ಯಾಟ್‌ನಲ್ಲಿದ್ದ ಚೀಟಿಗಳನ್ನು ಎಣಿಕೆ ಮಾಡಿದ ಬಳಿಕ ಅಧಿಕಾರಿಗಳು ಅಂತಿಮ ಫಲಿತಾಂಶ ಪ್ರಕಟಿಸಿದರು. ನಾಲ್ಕು ಸಿಯುಗಳಲ್ಲಿ ದೋಷ ಕಾಣಿಸಿದ್ದರಿಂದಾಗಿ ನಿಯಮಾನುಸಾರ ವಿವಿ ಪ್ಯಾಟ್‌ಗಳಲ್ಲಿದ್ದ ಚೀಟಿಗಳನ್ನು ಕೌಂಟ್ ಮಾಡಿದ್ದೇವೆ ಎಂದು ಡಿಸಿ ಟಿ. ವೆಂಕಟೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net