

ನಾಪೋಕ್ಲು: ನಾಲ್ಕು ನಾಡುವ್ಯಾಪ್ತಿಯ ವಿವಿಧೆಡೆ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶನಿವಾರ ಮುಸಲ್ಮಾನ ಸಮುದಾಯದವರು ಆಚರಿಸಿದರು.
ನಾಪೋಕ್ಲು, ಎಮ್ಮೆಮಾಡು, ಕೊಳಕೇರಿ, ಕುಂಜಿಲ, ಹಳೆ ತಾಲೂಕು, ಕೊಟ್ಟಮುಡಿ,ಪಡಿಯಾಣಿ, ಚೇರಿಯಪರಂಬು ಸೇರಿದಂತೆ ವಿವಿಧ ಜುಮಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಮೀಪದ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಯತ್ ವತಿಯಿಂದ ಬಕ್ರೀದ್ ಹಬ್ಬದ ಆಚರಣೆ ಮಸೀದಿಯ ಕತೀಬರಾದ ಅಶ್ರಫ್ ಅಹ್ಸನಿ ಉಸ್ತಾದ್ ಬಕ್ರೀದ್ ನಮಾಜ್‌ನ ನೇತ್ರತ್ವ ವಹಿಸಿ ಪ್ರಾರ್ಥನೆ ಮಾಡಿ ಬಕ್ರೀದ್ ಹಬ್ಬದ ಮಹತ್ವ ಸಾರಿದರು.
ಜಮಾಯತ್ ಅಧ್ಯಕ್ಷ ಅಶ್ರಫ್ ಎ.ಎ.ಕಾರ್ಯದರ್ಶಿ ರಫೀಕ್. ಎಂ.ಎಚ್.ಜಮಾಯತ್ ಆಡಳಿತ ಮಂಡಳಿ ಮತ್ತು ಸಮುದಾಯದವರು ಇದ್ದರು. ನಮಾಜ್ ಮುಗಿದ ನಂತರ ಸಿಹಿ ತಿಂಡಿ ಪಾನೀಯಗಳನ್ನು ಹಂಚಿ ತಮ್ಮ ತಮ್ಮ ಕುಟುಂಬದವರೊಂದಿಗೆ ಸಂಭ್ರಮಿಸಿದರು.