

ಬೆಂಗಳೂರು: ರಾಜ್ಯ ಸರ್ಕಾರ ನಾಲ್ಕು ಕ್ಲಸ್ಟರ್ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
ಆ ಪ್ರಕಾರವಾಗಿ ಬೆಂಗಳೂರಿನ ಮಹಾರಾಣಿ ಕ್ಲಸ್ಟ್‌ರ್ ವಿವಿ- ಬೆಂ.ವಿವಿ ರಾಸಾಯನಶಾಸದ ಪ್ರೊ.ಎಲ್. ಗೋಮತಿ ದೇವಿ, ರಾಯಚೂರು ವಿವಿ- ಧಾರವಾಡ ಕರ್ನಾಟಕ ವಿವಿಯ ರಾಜ್ಯಶಾಸ ್ರೊ.ಡಾ.ಹರೀಶ್ ರಾಮಸ್ವಾಮಿ, ಬೆಂಗಳೂರು ನೃಪತುಂಗ ವಿವಿ- ಬಾಗಲಕೋಟೆ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಎಸ್.ಬಾಲಿ, ಮಂಡ್ಯ ವಿವಿ- ಎಸ್‌ಜೆಬಿ ಇನ್ಟಿಟ್ಯೂಟ್ ಆ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ಪುಟ್ಟರಾಜು ಇವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಿ ಉನ್ನತ ಶಿಕ್ಷಣ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
ಈ ಹಿಂದೆ ಕೆಲವು ಕ್ಲಸ್ಟರ್ ವಿವಿಗಳಿಗೆ ವಿಶೇಷಾಧಿಕಾರಿಯನ್ನು ನೇಮಕ ಮಾಡಿತ್ತು. ಇದೇ ಮೊದಲ ಬಾರಿಗೆ ಕುಲಪತಿ ನೇಮಕ ಮಾಡಿದೆ. ಇವರ ಅಧಿಕಾರವಧಿ 4 ವರ್ಷ ಅಥವಾ 67 ವರ್ಷ ಯಾವುದು ಮೊದಲೋ ಅಲ್ಲಿಯವರೆಗೂ ಮುಂದುವರೆಯಬಹುದು.