ನಾಲ್ಕು ಕಾರ್ಮಿಕ ಸಂಹಿತೆ ರದ್ದು ಮಾಡಿ

0105KLB05
Published on

ಲಬುರಗಿ: ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಸಿಐಟಿಯುನಿಂದ ರ‍್ದಾರ್​ ವಲ್ಲಭಭಾಯಿ ಪಟೇಲ್​ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಮೆರವಣಿಗೆ ನಡೆಸಲಾಯಿತು. ಕೇಂದ್ರ ರ‍್ಕಾರ ಕರ‍್ಮಿಕರ ೪೪ ಕಾನೂನುಗಳನ್ನು ಸಮೀಕರಿಸಿ ೪ ಕರ‍್ಮಿಕ ಸಂಹಿತೆಗಳನ್ನಾಗಿ ರೂಪಿಸಿ, ಕರ‍್ಮಿಕರನ್ನು ಗುಲಾಮರನ್ನಾಗಿಸುತ್ತಿದೆ. ಈ ಸಂಹಿತೆ ರದ್ದು ಮಾಡಲು ಆಗ್ರಹಿಸಿದರು.

ಕರ‍್ಮಿಕರಿಗೆ ಎಂಟು ಗಂಟೆ ಕೆಲಸದ ಅವಧಿ, ಕಾಯಂ ಕೆಲಸ, ಕೆಲಸಕ್ಕೆ ತಕ್ಕ ವೇತನ, ಕರ‍್ಮಿಕರಿಗೆ ಸುರಕ್ಷತೆ ಒದಗಿಸಬೇಕು. ಕರ‍್ಮಿಕರಿಗೆ ಸಂಘಟನೆ ಕಟ್ಟಿ, ಮುಷ್ಕರ ನಡೆಸುವ ಹಕ್ಕು ನೀಡಬೇಕು. ಕರ‍್ಮಿಕರ ಬದುಕಿಗೆ ಮಾರಕವಾದ ಕಾಯ್ದೆಗಳನ್ನು ವಾಪಸ್​ ಪಡೆಯಬೇಕು ಎಂಬ ಬೇಡಿಕೆಗಳನ್ನು ಮಂಡಿಸಿದರು. ಗುತ್ತಿಗೆ ಕರ‍್ಮಿಕರು, ಸ್ಕೀಮ್​ ರ‍್ಕರ್​, ಸಂಘಟಿತ ಹಾಗೂ ಅಸಂಘಟಿತ ಕರ‍್ಮಿಕರಿಗೆ ರಾಷ್ಟ್ರವ್ಯಾಪಿ ಮಾಸಿಕ ೨೬ ಸಾವಿರ ರೂ. ಹಾಗೂ ರಾಜ್ಯ ವ್ಯಾಪ್ತಿಯಾಗಿ ಮಾಸಿಕ ೩೬ ಸಾವಿರ ರೂ. ಕನಿಷ್ಠ ಸಂಬಳ ನಿಗದಿ ಮಾಡಬೇಕು. ಗುತ್ತಿಗೆ, ಹೊರ ಗುತ್ತಿಗೆ, ನಿಗದಿತ ಅವಧಿ, ಅಪ್ರೆಂಟಿಸ್​, ಟೆನಿ ಹೆಸರಿನ ನೇಮಕಾತಿ ನಿಲ್ಲಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ತಕ್ಷಣದಿಂದ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷೆ ಶಾಂತಾ ಘಂಟಿ, ಪ್ರಧಾನ ಕರ‍್ಯರ‍್ಶಿ ಎಂ.ಬಿ. ಸಜ್ಜನ್​, ಖಜಾಂಚಿ ನಾಗಯ್ಯ ಸ್ವಾಮಿ, ಪ್ರಮುಖರಾದ ಗೌರಮ್ಮ ಪಾಟೀಲ್​, ಶ್ರೀಮಂತ ಬಿರಾದಾರ, ಬಾಬು, ಶೇಖಮ್ಮ ಕುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net