ನಾಲ್ಕನೇ ದಿನ ಪೂರೈಸಿದ ಸಂತ್ರಸ್ತರ ಹೋರಾಟ

22 SARAG01 (1)
ಸಂತ್ರಸ್ತರ ಹೋರಾಟಕ್ಕೆ ಗ್ರಾಪಂ ಸದಸ್ಯೆ ಸವಿತಾ, ಸಂತ್ರಸ್ತರ ಒಕ್ಕೂಟ ಸಮಿತಿಯ ಅಧ್ಯಕ್ಷೆ ನೀಲಮ್ಮ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೀರ್ವಾಳ್ ಬಸವರಾಜು ಇತರರು ಇದ್ದರು.
Published on

ಸರಗೂರು: ತಾಲೂಕಿನಲ್ಲಿ ಮಳೆಯಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಭಾನುವಾರ ನಾಲ್ಕನೇ ದಿನ ಪೂರೈಸಿದೆ.

ನಂತರ ನೆರೆ ಸಂತ್ರಸ್ತರ ಒಕ್ಕೂಟ ಸಮಿತಿಯ ಸದಸ್ಯೆ, ಹೆಗ್ಗನೂರು ಗ್ರಾಪಂ ಸದಸ್ಯೆ ಸವಿತಾ ಮಾತನಾಡಿ, ಧರಣಿ ಮುಂದುವರಿಯುತ್ತಿದ್ದರೂ ಯಾವುದೇ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷೃ ವಹಿಸಿದ್ದಾರೆ. ರಾಜಕೀಯ ನಾಯಕರು ಕೇವಲ ಭರವಸೆ ನೀಡುತ್ತಿದ್ದಾರೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ಹಾದನೂರು ಗ್ರಾಪಂ ಸದಸ್ಯ ಶಿವರಾಜು, ನೆರೆ ಸಂತ್ರಸ್ತರ ಒಕ್ಕೂಟ ಸಮಿತಿಯ ಅಧ್ಯಕ್ಷೆ ನೀಲಮ್ಮ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೀರ್ವಾಳ್ ಬಸವರಾಜು, ಎಪಿಪಿ ತಾಲೂಕು ಅಧ್ಯಕ್ಷ ಗ್ರಾಮೀಣ ಮಹೇಶ್, ಮಲ್ಲೇಶ್, ಚಿನ್ನಯ್ಯ, ನಾಗರಾಜು, ಬಸವಣ್ಣ, ದೊಡ್ಡಯ್ಯ, ನಾಗರಾಜು, ಶಿವಚನ್ನ, ವಾಲ್ಮೀಕಿ ಸಿದ್ದರಾಜು, ದಸಂಸ ಜಿಲ್ಲಾ ಸಂಚಾಲಕ ನಿಂಗರಾಜು, ಲಂಕೆಲಕ್ಷಣ್, ಪ್ರಕಾಶ್, ಕೆಂಪಸಿದ್ದ, ರವಿಕುಮಾರ್, ಸಿದ್ಧರಾಜು, ಜಗದೀಶ್, ನಾಗೇಂದ್ರ, ರೈತಪ್ರತಾಪ್, ಚನ್ನಿಪುರ ನಾಗರಾಜು, ಉಯ್ಯಂಬಳ್ಳಿ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net