ನಾಲ್ಕನೇ ದಿನ ಪೂರೈಸಿದ ಧರಣಿ

ಕೆ.ಆರ್.ಸಾಗರದ ಬೃಂದಾವನದ ಬಳಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾನುವಾರ ವಿವಿಧೆಡೆಯಿಂದ ಬಂದಿದ್ದ ರೈತ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
1693745134968
Published on

ಕೆ.ಆರ್.ಸಾಗರ: ಸತತವಾಗಿ ಪ್ರತಿಭಟನೆ ಮಾಡುತ್ತಿದ್ದರೂ ಕಿವಿಗೆ ಹಾಕಿಕೊಳ್ಳದೆ ತಮಿಳುನಾಡಿಗೆ ನೀರು ಬಿಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಕೆ.ಆರ್. ಸಾಗರದ ಬೃಂದಾವನದ ಬಳಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವ ಧರಣಿ ಭಾನುವಾರ ನಾಲ್ಕನೇ ದಿನ ಪೂರೈಸಿದೆ.

ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಗೆ ರಾಜ್ಯ ರೈತ ಸಂಘದ ಮುಖಂಡರು ಸಾಥ್ ನೀಡಿದರು. ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ರೈತ ಸಂಘದ ಅಧ್ಯಕ್ಷರು, ಪದಾಕಾರಿಗಳು ಮಾತನಾಡಿ, ಸರ್ಕಾರ ತಮಿಳುನಾಡಿನ ಜನರನು ್ನಓಲೈಸಿಕೊಲ್ಳಲು ನೀರು ಕೊಡುತ್ತಿದೆ. ಕೆಆರ್‌ಎಸ್ ಜಲಾಶಯ ಭರ್ತಿಯಾಗದೆ ಇದ್ದರೂ ತಮಿಳುನಾಡಿಗೆ ನೀರು ಕೊಡುವ ಅವಶ್ಯಕತೆ ಇತ್ತಾ? ರಾಜ್ಯದ ಜನರ ಹಿತ ಕಾಯುವ ಬದಲು ತಮಿಳುನಾಡಿನ ಜನರ ಪರವಾಗಿರುವುದು ಇದರ ಉದ್ದೇಶವಾದರೂ ಏನು ಎಂಬುದನ್ನು ಕೂಡಲೇ ತಿಳಿಸದಬೇಕು. ಸರ್ಕಾರ ನೀರು ನಿಲ್ಲಿಸಿ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರಿನ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಬೃಂದಾವನ ಒಳಗೆ ಹೋಗಲು ಪ್ರಯತ್ನಿಸಿದರು. ನಂತರ ಅವರನ್ನು ಪೊಲೀಸರು ತಡೆದು ವಾಪಸ್ ಧರಣಿ ಸ್ಥಳಕ್ಕೆ ಕರೆತಂದರು. ನಂತರ ರೈತರು ಧರಣಿ ಮುಂದುವರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net