ನಾಲ್ಕನೇ ಅಂತರ್ ಶಾಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನು ಉದ್ಘಾಟನೆ

ನಾಲ್ಕನೇ ಅಂತರ್ ಶಾಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನು ಉದ್ಘಾಟನೆ
Published on

      ಹಾಸನ: ವಿದ್ಯಾರ್ಥಿಗಳು ಸೋಲು ಗೆಲುವುಗಳ ಬಗ್ಗೆ ಚಿಂತೆ ಮಾಡದೆ ಪ್ರತಿಯೊಬ್ಬರೂ ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಬೇಕು. ಆಗ ಮಾತ್ರ ಕಲಿಯಲು ಸಾಧ್ಯವಾಗುತ್ತದೆ ಎಂದು ರಾಯಲ್ ಶಾಲೆ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ಕಿವಿಮಾತು ಹೇಳಿದರು.
      ಹೇಮಾವತಿ ನಗರದಲ್ಲಿರುವ ರಾಯಲ್ ಅಪಲೋ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕದಂಬ ಚೆಸ್ ಅಕಾಡೆಮಿ ವತಿಯಿಂದ ಭಾನುವಾರ ಶಾಲಾ ಮಕ್ಕಳಿಗೆ ನಾಲ್ಕನೇ ಅಂತರ್ ಶಾಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದು ಬಹು ಮುಖ್ಯವಾಗಿರುತ್ತದೆ. ಅದರ ಜೊತೆಗೆ ಸೋಲು ಗೆಲುವುಗಳನ್ನು ಕೂಡ ಸಮನಾಗಿ ಸ್ವೀಕರಿಸಬೇಕು ಎಂದರು.
      ಪ್ರತಿ ಮಕ್ಕಳು ಗುರಿಯನ್ನು ಇಟ್ಟುಕೊಂಡಿದ್ದಾಗ ಮಾತ್ರ ಅವರು ಮುಂದಿನ ಭವಿಷ್ಯವನ್ನು ಉಜ್ವಲವಾಗಿ ಸೂಪಿಸಿಕೊಳ್ಳಲು ಸಹಾಯವಾಗುತ್ತದೆ.ಚೆಸ್ ಕ್ರೀಡೆ ಪ್ರತಿ ವಿದ್ಯಾರ್ಥಿಗಳ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಇಲ್ಲಿ ಗೆದ್ದಂತಹ ಮಕ್ಕಳು ಮುಂದೆ ರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲಿ, ಸೋತಂತಹ ಮಕ್ಕಳು ಎದೆಗುಂದದೆ ಇನ್ನು ಹೆಚ್ಚಿನ ತರಬೇತಿಯನ್ನ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.
     ಜಿಲ್ಲಾ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ರಶ್ಮಿ ಕಿರಣ್ ಮಾತನಾಡಿ, ಈ ಕ್ರೀಡೆ ತಾಳ್ಮ ಮತ್ತು ಜಾನ್ಮೆಯಿಂದ ಆಟವಾಡಿದ್ದಾರೆ ಮಾತ್ರ ಗೆಲುವನ್ನು ಸಾಧಿಸಬಹುದು, ಸಾಕಷ್ಟು ಮಳೆ ಬರುತ್ತಿದ್ದರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ಎಂ.ಟಿ. ತ್ಯಾಗರಾಜ್, ಜಿಲ್ಲಾ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ಎಂ.ಎನ್. ಹರೀಶ್ ಕುಮಾರ್, ಖಜಾಂಚಿ ವಿ.ಜಿ.ಎಂ. ಪ್ರತಾಪ್, ಉಪ ಕಾರ್ಯದರ್ಶಿ ಎ. ಮಂಜುನಾಥ್ ಪ್ರಸಾದ್, ಸದಸ್ಯಆರ್. ರಾಧಾ ಹಾಗೂ ರಾಯಲ್ ಅಪೋಲೋ ಶಾಲೆಯ ಆಡಳಿತಾಧಿಕಾರಿ ಪೂಜಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net