

ಯಳಂದೂರು : ತಾಲೂಕಿನ ಮಲಾರಪಾಳ್ಯ ಗ್ರಾಮದ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕಬಿನಿ ನಾಲೆಯಲ್ಲಿ ಭಾನುವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ.
ನಾಲೆಯಲ್ಲಿ ದೇಹವು ಸಿಕ್ಕಿಹಾಕಿಕೊಂಡಿತ್ತು, ಇದನ್ನು ಸ್ಥಳೀಯರು ನೋಡಿ ಪೊಲೀಸ್‌ರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸುಮಾರು 30 ರಿಂದ 35 ವಯೋಮಾನದ ಗಂಡಸಿನ ಮೃತದೇಹವೆಂದು ಗುರುತಿಸಿದ್ದಾರೆ. ಮೃತದೇಹವು 3 ರಿಂದ 4 ದಿನಗಳ ಕಾಲ ಚಾನೆಲ್ ನೀರಿಗೆ ಬಿದ್ದು ಕೊಳೆತಿದ್ದು, ಎಡಗೈಯಲ್ಲಿ ಆರ್.ವಿ.ರವಿ ಎಂದು ಹಚ್ಚೆ ಗುರುತಿದೆ. ಬಲ ಕೈಯಲ್ಲಿ ಜೋಕರ್ ಟ್ಯಾಟೂ ಇದೆ. ಈತನ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಯಳಂದೂರು ಪೊಲೀಸ್ ಠಾಣೆ ಅಥವಾ ಚಾಮರಾಜನಗರ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು ಎಂದು ಯಳಂದೂರು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.