ನಾಲೆಗೆ ಜಿಗಿದು ಅರಣ್ಯ ಇಲಾಖೆ ನಿವೃತ್ತ ನೌಕರ ಆತ್ಮಹತ್ಯೆ

Published on

ಸಕಲೇಶಪುರ: ತಾಲೂಕಿನ ಹೆಬ್ಬನಹಳ್ಳಿ ಗ್ರಾಮ ಹೊರವಲಯದಲ್ಲಿ ಎತ್ತಿನಹೊಳೆ ನಾಲೆಗೆ ಜಿಗಿದು ಅರಣ್ಯ ಇಲಾಖೆ ನಿವೃತ್ತ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಗ್ರಾಮದ ಬೈರಯ್ಯ (68 ) ಆತ್ಮಹತ್ಯೆಗೆ ಶರಣಾದವರು. ಅನಾರೋಗ್ಯದಿಂದ ಬೆಸತ್ತು ಗುರುವಾರ ಬೆಳಗ್ಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಿಂದ ಮೃತದೇಹ ಹೊರತೆಗೆದು ಕ್ರಾಫರ್ಡ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಮೃತರ ಪತ್ನಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net