ನಾಲೆ ಏರಿ ಒಡೆದು ರೈತನ ಅಡಿಕೆ, ಬಾಳೆ ಬೆಳೆ ಅಪಾರ ನಷ್ಟ

ನಾಲೆ ಏರಿ ಒಡೆದು ರೈತನ ಅಡಿಕೆ, ಬಾಳೆ ಬೆಳೆ ಅಪಾರ ನಷ್ಟ
Published on

ಹೊಳೆನರಸೀಪುರ : ಹೇಮಾವತಿ ಬಲದಂಡ ನಾಲೆ ಏರಿ ಒಡೆದು ಬಂಟರತಲಾಳು ಗ್ರಾಮದ ದೇವರಾಜು ಎಂಬ ರೈತನ ಅಡಿಕೆ ಮತ್ತು ಬಾಳೆ ತೋಟ ಕೊಚ್ಚಿಕೊಂಡು ಹೋಗಿ ಅಪಾರ ನಷ್ಟವನ್ನುಂಟು ಮಾಡಿದೆ.

ತಾಲ್ಲೂಕಿನ ಹಳ್ಲಿಮೈಸೂರ್ ಹೋಬಳಿಯ ಶ್ರವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಂಟರ ತಳಲು ಅರೇಹಳ್ಳಿ ಮಾರ್ಗವಾಗಿ ಹೋಗುವ   41ನೆ ಗೇಟ್ ನ ಬಲದಂಡೆ ನಾಲೆ ಏರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ನಾಲೆಯ ಸಂಪೂರ್ಣ ನೀರು ಹರಿದ ಪರಿಣಾಮ ಬೆಳೆದು ನಿಂತಿದ್ದ ಅಡಿಕೆ, ಬಾಳೆ ತೋಟ ಹಾಳಾಗಿದ್ದು ರೈತನಿಗೆ ಅಪಾರ ನಷ್ಟ ಸಂಭವಿಸಿದೆ. 

ನಾಳೆ ಇರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರು ಸ್ಥಳಕ್ಕೆ ಹೇಮಾವತಿ ಬಲದಂಡನಾಲ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ತುರ್ತು ಕಾಮಗಾರಿಯನ್ನು ಕೈಗೊಂಡು ಒಡೆದ ಏರಿಯನ್ನು ದುರಸ್ತಿ ಮಾಡಿರುವುದಿಲ್ಲ ಇದರಿಂದ ಅಡಿಕೆ ಗಿಡ ಬಾಳೆ ಗಿಡ ಹಾಗೂ ಇತರ ಬೆಳೆಗಳು ಮಣ್ಣು ಪಾಲಾಗಿವೆ ನಮಗಾಗಿರುವ ನಷ್ಟವನ್ನು ಇಲಾಖೆಯೆ ಬರಿಸಬೇಕು ಎಂದು ರೈತರು ದೂರಿದ್ದಾರೆ. 

ಹೇಮಾವತಿ ಬಲದಂಡ ನಾಲೆಯ ಆಧುನಿಕರಣ ಕಾಮಗಾರಿ ಕಳೆದೆರಡು ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಕಾಮಗಾರಿ ಸಂಪೂರ್ಣ ಆಗಿರುವುದಿಲ್ಲ. ಅಲ್ಲಲ್ಲಿ ತುಂಡುಗುತ್ತಿಗೆ ಕಾಮಗಾರಿಯನ್ನು ನೀಡಿ ಗುಣಮಟ್ಟದ ಕಾಮಗಾರಿಯನ್ನು ನಡೆಸದೆ ಭ್ರಷ್ಟಾಚಾರ ಎಸೆಗಿದ್ದಾರೆ.

ನಾಲೆಯ ಕಾಂಕ್ರೀಟ್ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಗೊರೂರು ಇಂದ ದೊಡ್ಡಕಾಡನೂರು ವರೆಗೆ 92KM ಕೂಡಿರುವ ಈ ನಾಲೆ ಸಂಪೂರ್ಣ ಕಳಪೆ ಕಾಮಗಾರಿ ಯಾಗಿದ್ದು  ಅಧಿಕಾರಿಗಳು & ಗುತ್ತುಗೆದಾರ ರೈತರ ತೆರಿಗೆ ದುಡ್ಡನ್ನು ಕಳಪೆ ಕಾಮಗಾರಿ ಮಾಡಿ ಲೂಟಿ ಮಾಡಿದ್ದಾರೆ . ಕಳಪೆ ಕಾಮಗಾರಿಗೆ ಕಾರಣರಾದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

''ನಾಲೆ ಒಡೆದು ಹೋಗಿದ್ದರು ಯಾವೊಬ್ಬ ಅಧಿಕಾರಿಗಳು ಭೇಟಿ ನೀಡದ ಕಾರಣ  ಅಲ್ಲಿನ ರೈತರಿಗೆ ಬಹಳ ನಷ್ಟ ವಾಗಿದೆ. ಇದನ್ನು ಇಲಾಖೆಯವರೆ ತುಂಬಿಕೊಡಬೇಕು  ಇಲ್ಲವಾದರೆ ನೀರಾವರಿ ಇಲಾಖೆ ಮುಂದೆ  ಬಿಜೆಪಿ ಮುಖಂಡರು ಮತ್ತು ರೈತಾಪಿ ವರ್ಗದವರು ಧರಣಿ ಕೂರುತ್ತೇವೆ''

ಬಿಜೆಪಿ ಮುಖಂಡ ಡಿ ಆರ್ ಶಿವಣ್ಣ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net