ನಾರಾಯಣಪುರ ಗ್ರಾಪಂ ಜೆಡಿಎಸ್ ಬೆಂಬಲಿತರ ವಶ

10-pnp 2
Published on

ಪಾಂಡವಪುರ: ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎನ್.ಎಸ್.ಆನಂದ ಅಧ್ಯಕ್ಷರಾಗಿ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ನವೀನಾ ಅವಿರೋಧವಾಗಿ ಆಯ್ಕೆಯಾದರು.


18 ಸದಸ್ಯರ ಬಲವಿರುವ ಗ್ರಾಮ ಪಂಚಾಯಿತಿಗೆ ಗುರುವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಎಸ್.ಆನಂದ ಮತ್ತು ಶಿವಕುಮಾರ್ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಎನ್.ಎಸ್.ಆನಂದ್ 12 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಶಿವಕುಮಾರ ವಿರುದ್ಧ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಉಪಾಧ್ಯಕ್ಷಗಾದಿಗೆ ನವೀನಾ ಹೊರತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎನ್.ಪ್ರಕಾಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.


ಸದಸ್ಯರಾದ ಸುಷ್ಮಾ, ಎಸ್.ಆರ್.ಪ್ರಮೀಳಾ, ಕೆ.ಸುಶೀಲಾ, ಧನಲಕ್ಷ್ಮೀ, ಶಶಿಕಲಾ, ಮಂಗಳಾ, ಶೋಭಾ, ಪ್ರಕಾಶ್, ಮಹೇಶ್, ಶಿವಕುಮಾರ್, ಗೋಪಾಲ್, ನಾಗರಾಜು, ಗ್ರಾಪಂ ವ್ಯಾಪ್ತಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net