

ಚಿತ್ತಾಪುರ: ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಮಹಾ ಚಿಂತಕರಲ್ಲಿ ಅಗ್ರಗಣ್ಯರಾಗಿದ್ದಾರೆ. ಮಾನವನಿಗೆ ಒಂದೇ ಜಾತಿ, ಧರ್ಮ ಮತ್ತು ದೇವರು ಎಂಬ ಮೂರು ಅಸ್ತçಗಳನ್ನು ಬಳಸಿ ಹೊಸ ಸಮಾಜ ಕಟ್ಟಲು ಅವರು ಮಾಡಿದ ಪ್ರಯತ್ನ ಶ್ರೇಷ್ಠವಾದದ್ದು ಎಂದು ಆಕಾಶವಾಣಿ ಕೇಂದ್ರದ ನಿವೃತ್ತ ಅಧಿಕಾರಿ ಸದಾನಂದ ಪೆರ್ಲ ಹೇಳಿದರು.
ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತ, ಆರ್ಯ ಈಡಿಗ ಸಮಾಜದಿಂದ ಗುರುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ನಾರಾಯಣಗುರುಗಳ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈಡಿಗ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ಗುತ್ತೇದಾರ್, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮುಖಂಡ ಶಂಕರಗೌಡ ರಾವೂರಕರ್ ಮಾತನಾಡಿದರು. ಕಾಶೀನಾಥ ಗುತ್ತೇದಾರ್ ಉಪನ್ಯಾಸ ನೀಡಿದರು.
ತಾಪಂ ಇಒ ನೀಲಗಂಗಾ ಬಬಲಾದ ಉದ್ಘಾಟಿಸಿದರು. ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಪ್ರಮುಖರಾದ ಸತೀಶ ಗುತ್ತೇದಾರ್, ವೆಂಕಟೇಶ ಕಡೇಚೂರ, ಮಹಾದೇವ ಗುತ್ತೇದಾರ್, ನಾಗರಾಜ ಬಂಕಲಗಿ, ವಿನೋದ ಗುತ್ತೇದಾರ್, ಬಸವರಾಜ ಬೆಣ್ಣೂರಕರ್, ಸುರೇಶ ಗುತ್ತೇದಾರ್, ಸುನೀಲ್ ಗುತ್ತೇದಾರ್, ಡಿ. ಪಂಕಜಗೌಡ್, ಶಿವಯ್ಯ ಗುತ್ತೇದಾರ್, ಸಂತೋಷ ಗುತ್ತೇದಾರ್, ಆನಂದ ರಾವೂರಕರ್, ಸಿ. ಮುಕ್ತೇದಾರ್, ಹುಸನಯ್ಯ ಗುತ್ತೇದಾರ್, ಶ್ರೀಮಂತ ಗುತ್ತೇದಾರ್, ಡಿ.ನರಸಯ್ಯಗೌಡ, ವಿನಯ ಗುತ್ತೇದಾರ್, ಮಹೇಶ ಗುತ್ತೇದಾರ್ ಇತರರಿದ್ದರು.
ರೇಣುಕಾ ಮರಗೋಳ ಪ್ರಾರ್ಥಿಸಿದಿರು. ನಾಗಯ್ಯ ಗುತ್ತೇದಾರ್ ಕರದಾಳ ಸ್ವಾಗತಿಸಿದರು. ಶಿಕ್ಷಕ ನರಸಪ್ಪ ಚಿನ್ನಾಕಟ್ಟಿ ನಿರೂಪಣೆ ಮಾಡಿದರು.