ನಾಯ್ಕ ರಾಣೆ ಯುವಕರಿಗೆ ಪ್ರೇರಕ ಶಕ್ತಿ

Web
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್.ವಿ. ನಾಯ್ಕ ರಾಣೆ ದಕ್ಷ ಜನಪರ ವ್ಯಕ್ತಿ. ಸಹೃದಯತೆಗೆ ಸಾಕಾರಮೂರ್ತಿಯಾದ ಅವರದ್ದು ಸಾರ್ಥಕ ಬದುಕು ಎಂದು ಕರಾವಳಿ ಮುಂಜಾವು ಪತ್ರಿಕೆ ಕಾರ್ಯನಿರ್ವಾಹಕ ನಿರ್ದೇಶಕ ಗಂಗಾಧರ ಹಿರೇಗುತ್ತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಎಸ್.ವಿ. ನಾಯ್ಕ ರಾಣೆ ದತ್ತಿ ನಿಮಿತ್ತ ಬುಧವಾರ ಆಯೋಜಿಸಿದ್ದ ಚಿಂತನ-ಮಂಥನ ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ್ರಿಯಾಶೀಲ ವ್ಯಕ್ತಿ ಎಸ್.ವಿ. ನಾಯ್ಕ ರಾಣೆ ಇಳಿ ವಯಸ್ಸಿನಲ್ಲೂ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಕಲೆ, ಸಾಹಿತ್ಯ, ಪರಿಸರ ಹಾಗೂ ಸಂಗೀತದ ಆರಾಧಕರಾಗಿದ್ದು, ಅವರ ಚಿಂತನ-ಮಂಥನ ಕೃತಿ ಸಮಾಜಕ್ಕೊಂದು ಒಳ್ಳೆ ಸಂದೇಶ ನೀಡುವುದಾಗಿದೆ ಎಂದರು.
ಸಾಧನಾ ಮಾನವಹಕ್ಕು ಸಂರಕ್ಷಣಾ ಕೇಂದ್ರದ ಸಂಸ್ಥಾಪಕಿ ಡಾ. ಇಸಬೆಲ್ಲಾ ಝೇವಿಯರ್ ಮಾತನಾಡಿ, ನಾಯ್ಕ ರಾಣೆ ಎಲ್ಲರಿಗೂ ಸ್ಫೂರ್ತಿದಾಯಕ ವ್ಯಕ್ತಿ. ಸ್ವಂತ ಜಮೀನನ್ನು ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ದಾನ ನೀಡಿದ ಔದಾರ್ಯ ಗುಣ ಮೆರೆದ ಸಾಮಾಜಿಕ ಚಿಂತಕ ಎಂದರು.
ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಎಸ್. ವಿ. ನಾಯ್ಕರಾಣೆ ಮಾತನಾಡಿ ದತ್ತಿ ಆಶಯ ವಿವರಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಗಂಗಾಧರ ಹಿರೇಗುತ್ತಿ, ಜಾರ್ಜ್ ಫರ್ನಾಂಡಿಸ್, ನರೇಂದ್ರ ದೇಸಾಯಿ, ರವಿ ನಾಯ್ಕ, ಅನಿಲ ಗಾವಂಕರ ಅವರನ್ನು ಸನ್ಮಾನಿಸಲಾಯಿತು.
ಡಾ. ಧನವಂತ ಹಾಜವಗೋಳ, ಡಾ. ಎಂ.ವೈ. ಸಾವಂತ, ವಿರೂಪಾಕ್ಷ ದಿಕ್ಷೀತ, ಸಿದ್ದರಾಮ ಹಿಪ್ಪರಗಿ, ಸುರೇಶ ಹಿರೇಮಠ, ನಾರಾಯಣ ಕಾಮತ, ಎಸ್.ವಿ. ನಾಯ್ಕ ರಾಣೆ ಅಭಿಮಾನಿಗಳು, ಕುಟುಂಬಸ್ಥರು, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net