ನಾಯಿಗಳ ದಾಳಿಯಿಂದ ಟಗರು ರಕ್ಷಣೆ

7-KGL-2,,,,
Published on

ಕೊಳ್ಳೇಗಾಲ: ನಾಯಿಗಳ ದಾಳಿಗೆ ಸಿಲುಕಿದ್ದ ಟಗರನ್ನು ವ್ಯಕ್ತಿಯೊಬ್ಬರು ರಕ್ಷಣೆ ಮಾಡಿದ್ದಾರೆ. ಮನೆಯಿಂದ ತಪ್ಪಿಸಿಕೊಂಡು ರಸ್ತೆಗೆ ಬಂದಿದ್ದ ಟಗರು ಪಟ್ಟಣದ ಪೀಸ್ ಪಾರ್ಕ್ ಸಮೀಪ ಕಾಣಿಸಿಕೊಂಡಿದೆ. ಈ ಸಂದರ್ಭ ಏಳೆಂಟು ನಾಯಿಗಳು ಟಗರನ್ನು ಕಚ್ಚಲು ಮುಗಿಬಿದ್ದಿವೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಟಗರು ಹೆಣಗಾಡುತ್ತಿದ್ದನ್ನು ಗಮನಿಸಿದ ಹರಳೆ ಗ್ರಾಮದ ನಿವಾಸಿ ಸಿದ್ದರಾಜು ಕೂಡಲೇ ನಾಯಿಗಳನ್ನು ಓಡಿಸಿ ಟಗರನ್ನು ಹಿಡಿದು ರಕ್ಷಣೆ ಮಾಡಿದರು. ಬಳಿಕ ಪಟ್ಟಣ ಪೊಲೀಸರ ವಶಕ್ಕೆ ಟಗರನ್ನು ನೀಡಿದ್ದಾರೆ.

ಪಟ್ಟಣ ಪೊಲೀಸರು ಠಾಣೆಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಟಗರು ತಪ್ಪಿಸಿಕೊಂಡು ಬಂದಿರುವ ಮಾಹಿತಿಯನ್ನು ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸಾಮಂದಗೇರಿ ಬಡಾವಣೆ ನಿವಾಸಿ ಮೊಹಮ್ಮದ್ ಖುರಮ್ ಠಾಣೆಗೆ ಆಗಮಿಸಿ ಟಗರು ತಮ್ಮಂದೆಂದು ತಿಳಿಸಿದ್ದಾರೆ. ಬಳಿಕ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net