

ಗೋಕಾಕ: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದ್ದು, ಕೂಡಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಪೌರಾಯುಕ್ತ ಸಿದ್ದಪ್ಪ ಮಹಾಜನಗೆ ಮನವಿ ಸಲ್ಲಿಸಿದರು.
ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ತಿಂಗಳಿನಿಂದ ನಗರದ ಅಂಬೇಡ್ಕರ್ ನಗರ, ಗುರುವಾರ ಪೇಠ, ಹೊಸಪೇಟೆ ಗಲ್ಲಿ, ಜಲಾಲಗಲ್ಲಿ, ಕಿಲ್ಲಾ, ಬಾಂಬೆ ಚಾಳ್ ಹಾಗೂ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಬ್ಬಂಟಿಯಾಗಿ ಓಡಾಡದಂತಾಗಿದೆ. ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ. ಮಕ್ಕಳು, ವಯೋವೃದ್ಧರು ಸಂಚರಿಸದಂತಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಕೂಡಲೆ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಾಧಿಕ್ ಹಲ್ಯಾಳ, ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ಹನ್ೀ ಸನದಿ, ಅಶೋಕ ಬಂಡಿವಡ್ಡರ, ಪಪ್ಪು ಹಂದಿಗುಂದ, ರಮೇಶ ಕಮತಿ, ಮಲ್ಲು ಸಂಪಗಾರ, ಬಸವರಾಜ ಗಾಡಿವಡ್ಡರ, ಕರೆಪ್ಪ ಹೊರಟ್ಟಿ, ಕೆಂಪಣ್ಣ ಕಡಕೋಳ, ಮಹಾನಿಂಗ ಪೂಜಾರಿ, ಮಹಾದೇವ ಹುಚ್ಚನವರ, ದುಂಡಪ್ಪ ಪಾಟೀಲ, ತುಕಾರಾಮ ಪಕ್ಕೆನ್ನವರ, ರಾಮ ಕುಡ್ಡಮ್ಮಿ, ರಾಮ ಕೊಂಗನೋಳಿ, ಮಂಜುನಾಥ ಜಾಗನೂರ ಇತರರಿದ್ದರು.