ನಾಯಿ ಮರಿ ಹೊತ್ತೊಯ್ದ ಚಿರತೆ

17KWR5
Published on

ಕಾರವಾರ: ನಗರದ ಬೈತಖೋಲ್ ತೈಲ ಸಂಗ್ರಹಾಗಾರದ ಸಮೀಪ ಚಿರತೆಯೊಂದು ನಾಯಿ ಮರಿಗಳನ್ನು ಹಿಡಿದುಕೊಂಡು ಹೋದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

ತನ್ನ ಮರಿಗಳಿಗೆ ಹಾಲುಣಿಸುತ್ತಿದ್ದ ನಾಯಿಯ ಮೇಲೆ ಚಿರತೆ ನಿಧಾನವಾಗಿ ಬಂದು ದಾಳಿ ಮಾಡುತ್ತದೆ. ಎಚ್ಚೆತ್ತ ನಾಯಿ ಚಿರತೆಯಿಂದ ತಪ್ಪಿಸಿಕೊಂಡು ಅದನ್ನೇ ಅಟ್ಟಿಸಿಕೊಂಡು ಹೋಗುತ್ತದೆ. ಆದರೆ, ಚಿರತೆ ಮತ್ತೊಂದು ಮಾರ್ಗದಲ್ಲಿ ಬಂದು ನಾಯಿ ಮರಿಗಳನ್ನು ಕಚ್ಚಿಕೊಂಡು ಪರಾರಿಯಾಗುತ್ತದೆ. ನಗರದ ನಡುವೆಯೇ ಇರುವ ಪ್ರದೇಶದಲ್ಲಿ ಚಿರತೆ ರಾಜಾರೋಷವಾಗಿ ಬಂದು ಬೇಟೆ ಆರಂಭಿಸಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಇದು ಮೊದಲಲ್ಲ: ಬೈತಖೋಲ್ ಹಿಂದೆ ದೊಡ್ಡ ಬೆಟ್ಟವಿದೆ. ಅಲ್ಲಿನ ಕಲ್ಲುಗಳ ಮೇಲೆ ಹುಲಿ ಚಿರತೆಗಳು ಬಂದು ವಿಶ್ರಾಂತಿ ಪಡೆಯುವುದು ಸಾಮಾನ್ಯವಾಗಿದೆ. ಒಂದೆರಡು ವರ್ಷಗಳ ಹಿಂದೆ ಹುಲಿ ವಿಶ್ರಾಂತಿ ಪಡೆಯುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net