ನಾಯಿ ದಾಳಿಗೆ 12 ಕುರಿಮರಿ ಸಾವು

Published on

ಪಾವಗಡ:- ತಾಲೂಕಿನ ನಾಗಲಮಡಿಕೆ ಹೋಬಳಿಯ ಹೊಸಹಳ್ಳಿ ತಾಂಡಾದಲ್ಲಿ ಶನಿವಾರ ಸಂಜೆ ಬೀದಿ ನಾಯಿಗಳ ದಾಳಿಗೆ 12 ಕುರಿ ಮರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಗ್ರಾಮದ ಕಸನನಾಯ್ಕ ಎಂಬುವವರಿಗೆ ಸೇರಿದ ಕುರಿ ಮರಿಗಳ ಮೇಲೆ 5 ನಾಯಿಗಳು ದಾಳಿ ನಡೆಸಿದ್ದವು. ಸ್ಥಳಕ್ಕೆ ಪಶು ಇಲಾಖೆ ಅರಸಿಕೆರೆ ಪಶುವೈದ್ಯಾಧಿಕಾರಿ ಡಾ.ಮಹಮದ್​ ಸೂಫಿಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net