ನಾಯಿ ಕಡಿತಕ್ಕೆ ಮಗು ಬಲಿ: ಲಕ್ಷ್ಮೀತಾಯಿ ಫೌಂಡೇಶನ್ನಿಂದ ಆರ್ಥಿಕ ಸಹಾಯ

laxmi habbalkar
ನಾಯಿ ಕಡಿತದಿಂದ ತಮ್ಮ ಮಗುವನ್ನ ಕಳೆದುಕೊಂಡಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ೫೦ ಸಾವಿರ ರೂ.ಚೆಕ್‌ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿದರು.
Published on

ಬೆಳಗಾವಿ: ನಾಯಿ ಕಡಿತದಿಂದ ಮೃತಪಟ್ಟ ಖಾನಾಪುರ ತಾಲೂಕಿನ ಗೋಧೋಳಿ ಗ್ರಾಮದ ಬಾಲಕಿಯ ಕುಟುಂಬಕ್ಕೆ ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಆರ್ಥಿಕ ನೆರವು ನೀಡಿದರು. ಗೋಧಳಿ ಗ್ರಾಮದ ನಿವಾಸಿ ನಾರಾಯ‌ಣ ಕದಮ್ ಅವರ 5 ವರ್ಷದ ಮಗಳು ಮನೆ ಕಟ್ಟೆಯ ಮೇಲೆ ಆಟವಾಡುವ ಸಮಯದಲ್ಲಿ ನಾಯಿ ಕತ್ತಿನ ಭಾಗಕ್ಕೆ ಬಲವಾಗಿ ಕಚ್ಚಿರುವ ಕಾರಣ ಮಗುವಿನ ಮೆದುಳಿಗೆ ಇನ್ಫೆಕ್ಷನ್ ಆಗಿ ಯಾವುದೇ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಆ ಮಗುವಿನ ತಂದೆ, ತಾಯಿಗೆ ಸಾಂತ್ವನವನ್ನು ಹೇಳಿ, ಧೈರ್ಯ ತುಂಬಿದ ಲಕ್ಷ್ಮೀ ಹೆಬ್ಬಾಳಕರ್, ಲಕ್ಷ್ಮೀ ತಾಯಿ ಫೌಂಡೇಷನ್‌ ವತಿಯಿಂದ 50 ಸಾವಿರ ರೂ.ಚೆಕ್ ವಿತರಿಸಿ ಸಹಾಯ ಹಸ್ತ ನೀಡಿದರು. ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net