ನಾಯಿ ಕಡಿತ ಬಾಲಕಿಗೆ ಗಂಭೀರ ಗಾಯ

klb3
ಶಹಾಬಾದ್‌ನಲ್ಲಿ ನಾಯಿ ಕಡಿತದಿಂದ ಗಾಯಗೊಂಡು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಗೆ ನಗರಸಭೆಯಿಂದ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮುನಾವರ್ ದೌಲಾ ಪರಿಹಾರ ಚೆಕ್ ನೀಡಿದರು. ತಹಸೀಲ್ದಾರ್ ಜಗದೀಶ ಚೌರ, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ ಇದ್ದರು.
Published on

ಶಹಾಬಾದ್: ಶರಣ ನಗರ ಬಡಾವಣೆಯಲ್ಲಿ ಬುಧವಾರ ಬೆಳಗ್ಗೆ ನಾಯಿ ಕಚ್ಚಿ ಗಂಭೀರ ಗಾಯಗೊಂಡ ಬಾಲಕಿ ದೀಪಾಲಿಗೆ ನಗರಸಭೆಯಿಂದ ಐದು ಸಾವಿರ ರೂ. ಪರಿಹಾರ ವಿತರಿಸಲಾಯಿತು.

ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಭೇಟಿ ಮಾಡಿದ ಜಿಲ್ಲಾ ನಗರ ಯೋಜನಾ ನಿರ್ದೇಶಕ ಮುನಾವರ್ ದೌಲಾ ಪರಿಹಾರ ಚೆಕ್ ವಿತರಿಸಿದರು. ತಹಸೀಲ್ದಾರ್ ಜಗದೀಶ ಚೌರ, ಪೌರಾಯುಕ್ತ ಡಾ.ಕೆ. ಗುರುಲಿಂಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ ಇತರರಿದ್ದರು.

ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಮಾತನಾಡಿ, ಜಿಲ್ಲಾಧಿಕಾರಿ, ಶಾಸಕರ ಆದೇಶದಂತೆ ನಾಯಿ ಕಚ್ಚಿದ ಬಾಲಕಿ ಆಸ್ಪತ್ರೆ ವೆಚ್ಚವನ್ನು ನಗರಸಭೆ ವಹಿಸಿಕೊಳ್ಳಲಿದೆ ಎಂದು ಹೇಳಿದರು.

ಭೇಂಡಿ ಬಜಾರ್‌ನಲ್ಲೂ ಯಾಸೀನ್ ಗೋರೆಬಾಯಿ ಎಂಬ ಮೂಗ ಬಾಲಕನ ಕಿವಿ ಮತ್ತು ಮಹಿಳೆಯೊಬ್ಬಳ ಎದೆಗೆ ನಾಹಿತಿ ಕಚ್ಚಿರುವ ಮಾಹಿತಿ ಇದೆ.
ಶಾಸಕ ಮತ್ತಿಮಡು ನೆರವು: ಮೈಸೂರು ಚಲೋ ಪಾದಯಾತ್ರೆಯಲ್ಲಿರುವ ಶಾಸಕ ಬಸವರಾಜ ಮತ್ತಿಮಡು, ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ವೈದ್ಯರೊಂದಿಗೆ ಮಾತನಾಡಿ ಶಸ್ತçಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಐದು ದಿನದ ನಂತರ ಶಸ್ತçಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net