ನಾಯನೇಗಲಿ ಚೆಕ್‌ಪೋಸ್ಟನಲ್ಲಿ ೧೩ ಲಕ್ಷ ರೂ. ಜಪ್ತಿ

bkt-8-3
ನಾಯನೇಗಲಿ ನಾಕಾ ಚೆಕ್‌ಪೋಸ್ಟನಲ್ಲಿ ೧೩ ಲಕ್ಷ ರೂ.ಗಳ ನಗದನ್ನು ಜಪ್ತ ಮಾಡಿ ವಶಕ್ಕೆ ಪಡೆಯಲಾಗಿದೆ.
Published on

ಬಾಗಲಕೋಟೆ: ಲೋಕಸಭಾ ಚುನಾವಣೆ-೨೦೨೪ರ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯ ನಾಯನೇಗಲಿ ನಾಕಾ ಚೆಕ್‌ಪೋಸ್ಟನಲ್ಲಿ ದಾಖಲೆ ಇಲ್ಲದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು ೧೩ ಲಕ್ಷ ರೂ.ಗಳ ನಗದನ್ನು ಜಪ್ತ ಮಾಡಿ ವಶಕ್ಕೆ ಪಡೆಯಲಾಗಿದೆ.

ಬೆಳಗಿನ ಜಾವ ವಿಜಯಪೂರ ಮಾರ್ಗವಾಗಿ ಹೊರಟಿದ್ದ ಗೂಡ್ಸ ವಾಹನಗಳಲ್ಲಿ ೭ ಲಕ್ಷ ರೂ. ಮತ್ತು ೬ ಲಕ್ಷ ರೂ.ಗಳನ್ನು ತಪಾಸಣೆ ವೇಳೆ ದೊರೆತಿದ್ದು, ಸ್ಟಾö್ಯಟಿಕ್ ಸರ್ವೆಲೆನ್ಸ್ ತಂಡ ಸದರಿ ನಗರದನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net