ನಾಯಕರಿಗೆ ಸೆಡ್ಡು ಹೊಡೆಯವವರ ಬಗ್ಗೆ ತಲೆ ಕೆಡಿಸಿಕೊಳ್ಳ ಬೇಡಿ

CTD NEWS BJP--0004
Published on

ಚಿತ್ರದುರ್ಗ: ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಶ್ರಮಿಸುವಂತೆ ಚಿತ್ರದುರ್ಗ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರ ಬಿಜೆಪಿ-ಜೆಡಿ ಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ಕಾರ‌್ಯಕರ್ತರಿಗೆ ಸೂಚಿಸಿದರು.
ನಗರದ ಬಿಜೆಪಿ ಚುನಾವಣಾ ಕಾರ‌್ಯಾಲಯದಲ್ಲಿ ಶುಕ್ರವಾರ ಮಾತನಾಡಿದ ಅವರು,ಪ್ರತಿಭಟನೆ,ಪಕ್ಷ ವಿರೋಧಿ ಚಟುವಟಿಕೆಗಳು ಹಾಗೂ ರಾ ಷ್ಟ್ರೀಯ ನಾಯಕರಿಗೆ ಸೆಡ್ಡು ಹೊಡೆಯವವರ ಬಗ್ಗೆ ಕಾರ‌್ಯಕರ್ತರು ತಲೆ ಕೆಡಿಸಿಕೊಳ್ಳದೆ,ಬಸಣವಣ್ಣವರ ತತ್ವ ಪಾಲಿಸಬೇಕೆಂದು ಕಾರ‌್ಯಕರ್ತರಿಗೆ ಸಲಹೆ ನೀಡಿದರು.
ಪಕ್ಷದ ವರಿಷ್ಠರು ಅಳೆದೂ ತೂಗಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ,ಪಕ್ಷ ನನಗೆ ತಾಯಿ ಇದ್ದಂತೆ,35 ವರ್ಷ ಗಳ ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಪಕ್ಷದ ಆದೇಶ ಉಲ್ಲಂಘಿಸಿಲ್ಲ,ಅಂಥ ಶಕ್ತಿ ನನ್ನಲ್ಲಿ ಇಲ್ಲ, ಜೆಡಿಎಸ್ ಮೈತ್ರಿಯಿಂದಾಗಿ ನಮಗೆ ಆನೆ ಬಲ ಬಂದಂತಾಗಿದೆ.
ಬಿಜೆಪಿ,ಜೆಡಿಎಸ್ ಅಭ್ಯರ್ಥಿಗಳು ಒಂದೇ ತಾಯಿ ಮಕ್ಕಳಂತೆ ಪಕ್ಷದ ಗೆಲುವಿಗೆ ಶ್ರಮಿಸಬೇಕಿದೆ. ಸಮಯದ ಅಭಾವವಿದ್ದು,ಕಾರ‌್ಯಕರ್ತರು ಕೂ ಡಲೇ ಕಾರ್ಯಪ್ರವೃತ್ತ ರಾಗಬೇಕು. ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ತೆರಳಲು ಸಾಧ್ಯವಾಗದು,ಆದ್ದರಿಂದ ಕಾರ್ಯಕರ್ತರೇ ಈ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕೆಂದರು.
ದೇಶದಲ್ಲಿ ಬಿಜೆಪಿ ಪರ ವಾತಾವರಣವಿದೆ. ಮೋದಿ ಅವರು ಮತ್ತೆ ಪ್ರಧಾನಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.ಇದಕ್ಕೆ ಚಿ ತ್ರದುರ್ಗದಿಂದಲೂ ಕೊಡುಗೆ ಕೂಡ ಬೇಕು. ದೇಶಕ್ಕೆ ಸ್ವಾತಂತ್ರ್ಯಬಂದ 75 ವರ್ಷಗಳಾಗಿದ್ದು,10 ವರ್ಷ ಅಧಿಕಾರ ನಡೆಸಿರುವ ಮೋದಿ ಅವರ ಅಧಿಕಾರಾವಧಿ ದೇಶ ದುಪ್ಪಟ್ಟು ಅಭಿವೃದ್ಧಿ ಹೊಂದಿದೆ.
ಶ್ರೀ ರಾಮಮಂದಿರವನ್ನು ನಿರ್ಮಾಣ ಮಾಡಿರುವ ಮೋದಿ ಅವರು,23 ವರ್ಷಗಳಿಂದ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಆದರೆ ಅವರ ವಿರುದ್ಧ ಒಂದೇ ಒಂದು ಆರೋಪ ಕೇಳಿ ಬಂದಿಲ್ಲ. ಅಂಥ ಸ್ವಚ್ಛ ಆಡಳಿತವನ್ನು ಕೊಟ್ಟಿದ್ದಾರೆ. ಚಿತ್ರದುರ್ಗವನ್ನು ಬಾಗಲಕೋಟೆ ಮಾದರಿ ಅಭಿವೃದ್ಧಿ ಮಾಡುತ್ತೇನೆ ಎಂದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಎಸ್.ಲಿಂಗಮೂರ್ತಿ ಅವರು ಮಾತನಾಡಿ,ಚಿತ್ರದುರ್ಗದ ಟಿಕೆಟ್ ಕೊನೆಯಲ್ಲಿ ಘೋಷಣೆ ಆಗಿದೆ ಎಂದರೆ ಮಹತ್ವವನ್ನು ಅರಿಯ ಬೇಕು. ಕಾರಜೋಳ ಅವರು ನಡೆದಾಡುವ ಬಸವಣ್ಣ ಇದ್ದಂತೆ. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರನ್ನು 2ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ,ಇದಕ್ಕಾಗಿ ಪ್ರತಿಬೂತ್‌ನಲ್ಲೂ ಪಕ್ಷಕ್ಕೆ ಲೀಡ್ ಪಡೆಯಬೇಕಿದೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಮಾತನಾಡಿ,ಕಾರಜೋಳ ಅವರಿಗೆ ಸುದೀರ್ಘ ಅನುಭವವಿದೆ. ಹಿಮಾಲಯದಿಂದ ಕನ್ಯಾಕುಮಾ ರಿಯವರೆಗೆ ಬಿಜೆಪಿ ಅಲೆ ಇದೆ. ಕೇರಳದಲ್ಲೂ ನಿರೀಕ್ಷೆ ಮೀರಿದ ಬೆಂಬಲ ಸಿಗುತ್ತಿದೆ. ಈ ಉತ್ಸಾಹ ಗಮನಿಸಿದರೆ 400ಕ್ಕೂ ಹೆಚ್ಚು ಸೀಟು ಗ ಳೊಂದಿಗೆ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ. ಕಮಲದ ಚಿಹ್ನೆಯೇ ನಮ್ಮ ಅಭ್ಯರ್ಥಿ.ಇದೇ ಗುರುತಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡಬೇಕೆಂದು ಕಾರ‌್ಯಕರ್ತರಿಗೆ ಸೂಚಿಸಿದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ,ಜೆಡಿಎಸ್ ಮೈತ್ರಿಯಿಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗಳು ಗೆಲುವು ಸಾಧಿಸಲಿದ್ದಾರೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಬೇಕು. ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಗರ್ವಭಂಗಕ್ಕೆ ಜನ ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಖಾತೆ ತೆರೆಯದು.
ಭದ್ರಾ ಮೇಲ್ದಂಡೆ ವಿರುದ್ಧ ಹೋರಾಡಿದ್ದ ಚಂದ್ರಪ್ಪರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದೆ. ನೀರಾವರಿ ಯೋಜನೆಗಳೆಡೆ ಸಾಕಷ್ಟು ಅ ನುಭವ ಹೊಂದಿರುವ ಕಾರಜೋಳರು ಸಂಸದರಾಗಿ ಯೋಜನೆ ಪೂರ್ಣಗೊಳಿಸಲಿದ್ದಾರೆ. ಕೇಂದ್ರದಿಂದ ಹೆಚ್ಚಿನ ಅನುದಾನ ತರುವ ಶಕ್ತಿ ಅವ ರಿಗೆ ಇದೆ ಎಂದರು.
ಮಾಜಿ ಶಾಸಕ ಪ್ರೊ.ಲಿಂಗಣ್ಣ,ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ,ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ,ಬಾಳೆಕಾಯಿ ರಾಮದಾಸ್, ಸುರೇಶ್ ಸಿದ್ದಾಪುರ,ಸಂಪತ್‌ಕುಮಾರ್,ಭಾರ್ಗವಿದ್ರಾವಿಡ,ವೆಂಕಟೇಶ್ ದೊಡ್ಡೇರಿ ಮತ್ತಿತರರು ಇದ್ದರು.

ಪ್ರತಿಭಟನೆ ಬಿಸಿ
ಚಿತ್ರದುರ್ಗಕ್ಕೆ ಸಂಜೆ ಕಾರಜೋಳ ಅವರು ಎಂಟ್ರಿ ಕೊಡುತ್ತಿದ್ದಂತೆ,ಎಂ.ಸಿ.ರಘುಚಂದನ್ ಬೆಂಬಲಿಗರ ಗೋ ಬ್ಯಾಕ್ ಪ್ರತಿಭಟನೆ ಬಿಸಿ ಎದುರಿಸ ಬೇಕಾಯಿತು. ಚಳ್ಳಕೆರೆ ಗೇಟ್ ಬಳಿ ಭಿತ್ತಿ ಪತ್ರ ಹಿಡಿದು ಕಾರಜೋಳರ ವಿರುದ್ಧ ಘೋಷಣೆಗಳನ್ನು ಕೂಗಿದ ರಘುಚಂದನ್ ಬೆಂಬಲಿಗರು ಬಳಿಕ ಸಭೆ ನಡೆಯುತ್ತಿದ್ದ ಬಿಜೆಪಿ ಚುನಾವಣಾ ಕಾರ‌್ಯಾಲಯದ ಬಳಿ ಪ್ರತಿಭಟಿಸಿದರು. ಈ ವೇಳೆ ಪೊಲೀಸರು ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರನ್ನು ವಶಕ್ಕೆ ಪಡೆದರು. ಸಭೆಯಲ್ಲಿದ್ದ ಕೆಲವು ಬಿಜೆಪಿ ಕಾರ‌್ಯಕರ್ತರು ಪಕ್ಷದಿಂದ ಶಾಸಕ ಚಂದ್ರಪ್ಪ ಉಚ್ಛಾಟಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಭರವಸೆ ಕೊಡಲು ನಾನೂ ಯಾರು?
ನಾನು ರಘಚಂದನ್‌ಗೆ ಭರವಸೆ ಕೊಡಲು ನಾನೂ ಯಾರು? ಅಂಥ ಭರವಸೆ ಕೊಡಲು,ಸಿಡಬ್ಲೂೃಸಿ ಚೇರ್‌ಮನ್ ಅಲ್ಲ,ರಾಷ್ಟ್ರೀಯ ಅಧ್ಯಕ್ಷ ಅಲ್ಲ,ಪ್ರಧಾನಿಯೂ ಅಲ್ಲ, ನನ್ನ ಜೀವನದಲ್ಲಿ ಯಾರಿಗೂ ಸುಳ್ಳು ಭರವಸೆ ಕೊಟ್ಟಿಲ್ಲವೆಂದು ಗೋವಿಂದ ಕಾರಜೋಳ ಅವರು ಹೇಳಿದರು. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ,ರಘುಚಂದನ್‌ಗೆ ಕ್ಷೇತ್ರ ಪ್ರವಾಸ ನಡೆಸುವಂತೆ ಹೇಳಿದ್ದ ಕಾರಜೋಳರು ಟಿಕೆಟ್ ಭರವಸೆ ಕೊಟ್ಟಿದ್ದ ರೆಂಬ ಶಾಸಕ ಚಂದ್ರಪ್ಪರ ಆರೋಪವನ್ನು ತಳ್ಳಿ ಹಾಕಿದರು. ಯಡಿಯೂರಪ್ಪರ ಸುದೀರ್ಘ 50 ವರ್ಷ ರಾಜಕಾರಣದಲ್ಲಿ ಎಂದಿಗೂ ಆ ರೀತಿ ಮಾತನಾಡುವುದಿಲ್ಲವೆಂದು ರಘುಚಂದನ್‌ಗೆ ಟಿಕೆಟ್ ಕೊಟ್ಟರೆ ಕ್ಯಾಂಪೆನ್ ಮಾಡುವುದಿಲ್ಲವೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಸ್ಪರ್ಧೆಗೆ ನಿರಾಸಕ್ತಿ ಪ್ರಕಟಿಸಿದ್ದರಿಂದಾಗಿ ಚಿತ್ರದುರ್ಗದಿಂದ ಡೆಲ್ಲಿಯವರೆಗೂ ನನ್ನ ಹೆಸರು ಶಿಫಾರಸು ಆಯಿತು. ಆದ್ದರಿಂದ ನಾನು ಅಭ್ಯರ್ಥಿಯಾಗಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net