ನಾಯಕತ್ವದ ಗುಣ ಬೆಳೆಸಲಿರುವ ಎನ್‌ಸಿಸಿ

09Kush003 (1)
ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳಿಗೆ ನಿವೃತ್ತ ಸೈನಿಕ ಜನಾರ್ದನ ಸಮವಸ್ತ್ರ ವಿತರಿಸಿದರು. ಸದಾಶಿವಯ್ಯ ಎಸ್.ಪಲ್ಲೇದ್, ಉರಾ ನಾಗೇಶ್, ಎಂ.ಎಸ್.ಮಹೇಂದ್ರ, ಮಂಜುನಾಥ್, ಶಿವರಾಜ್ ಇದ್ದರು.
Published on

ಕುಶಾಲನಗರ: ಎನ್‌ಸಿಸಿ ದೇಶದ ಯುವಕರಿಗೆ ಕರ್ತವ್ಯ, ಬದ್ಧತೆ, ಸಮರ್ಪಣೆ, ಶಿಸ್ತು ಮತ್ತು ನೈತಿಕ ಮೌಲ್ಯಗಳ ಪ್ರಜ್ಞೆಯೊಂದಿಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ಅವಕಾಶ ಒದಗಿಸುತ್ತದೆ ಎಂದು ನಿವೃತ್ತ ಸೈನಿಕ ಜನಾರ್ದನ್ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟಿತ, ತರಬೇತಿ ಪಡೆದ ಮತ್ತು ಪ್ರೇರಿತ ಯುವಕರನ್ನು ಸೃಷ್ಟಿಸುವುದು ಎನ್‌ಸಿಸಿ ಮುಖ್ಯ ಗುರಿ. ಹೀಗಾಗಿಯೇ ಎನ್‌ಸಿಸಿ ರಾಷ್ಟ್ರಕ್ಕಾಗಿ ಸೈನಿಕರನ್ನು ಸೃಷ್ಟಿ ಮಾಡುವುದರ ಜತೆಗೆ ಯುವಕರಲ್ಲಿ ನಾಯಕತ್ವದ ಗುಣ ಬೆಳಸಲಿದೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ಯುವಕರಲ್ಲಿ ಸಾಹಸ ಮನೋಭಾವ ಮತ್ತು ನಿಸ್ವಾರ್ಥ ಸೇವೆ ಮಾಡುವುದನ್ನು ಎನ್‌ಸಿಸಿ ಕಲಿಸಲಿದೆ ಎಂದರು.

ಭಾರತ ತಂಡದ ಹ್ಯಾಂಡ್ ಬಾಲ್ ಕ್ರೀಡಾಪಟು ಹಾಗೂ ಸೈನಿಕ ಗ್ರೀನಿಡ್ಜ್ ಮಾತನಾಡಿ, ಶಿಸ್ತುಬದ್ಧ ಜೀವನವನ್ನು ನಡೆಸುವುದನ್ನು ಎನ್‌ಸಿಸಿ ಕಲಿಸುವುದರ ಜತೆಗೆ ದೇಶಭಕ್ತಿ ಬೆಳೆಸುತ್ತದೆ ಎಂದರು.

ಶಾಲೆಯ ಉಪ ಪ್ರಾಂಶುಪಾಲ ಪರಮೇಶ್ವರಪ್ಪ ಮಾತನಾಡಿದರು. ಎನ್‌ಸಿಸಿ ಕೇರ್ ಟೇಕರ್ ಆಫೀಸರ್ ಆಗಿ ಶಿಕ್ಷಕ ಎಂ.ಎಸ್.ಮಹೇಂದ್ರ ನೇಮಕಗೊಂಡರು. ಸೈನಿಕ ಮಹೇಂದ್ರ, ಶಿಕ್ಷಕರಾದ ಉರಾ ನಾಗೇಶ್, ಮಂಜುನಾಥ್, ದಿನೇಶ್, ಹಳೇ ವಿದ್ಯಾರ್ಥಿಗಳ ಟ್ರಸ್ಟ್ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿ ಆದಂ ನಿರ್ದೇಶಕಿ ನವ್ಯಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net