ನಾಯಕ ಯುವಕರ ಸಂಘದಿಂದ ಗಣೇಶೋತ್ಸವ

28mdk04
Published on

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರದಲ್ಲಿ ವಿನಾಯಕ ಯುವಕರ ಸಂಘದ ವತಿಯಿಂದ 31ನೇ ವರ್ಷದ ಗಣೇಶೋತ್ಸವವನ್ನು ಬುಧವಾರ ಆಚರಿಸಲಾಯಿತು.

ಬೆಳಗಿನ ಜಾವದಿಂದಲೇ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಗಣಪತಿ ಮಂಟಪವನ್ನು ವಿದ್ಯುತ್ ಅಲಂಕೃತಗಳಿಂದ ಸಿಂಗರಿಸಲಾಯಿತು. ಮೂರು ದಿನಗಳ ಕಾಲ ವಿನಾಯಕನಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ನಂತರ ಮೆರವಣಿಗೆ ಮೂಲಕ ಸಾಗಿ ಗಣೇಶನನ್ನು ವಿಸರ್ಜಿಸಲಾಗುವುದು. ಭಕ್ತರಿಗೆ ಅನ್ನದಾನವನ್ನೂ ಏರ್ಪಡಿಸಲಾಗಿದೆ ಎಂದು ವಿನಾಯಕ ಯುವಕರ ಸಂಘದ ಪ್ರತಿನಿಧಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷ ಶಾಮಿಯಾನ ಹಾಕಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಗಣಪತಿ ಪ್ರತಿಷ್ಠಾಪನೆಗೆ ಶಾಶ್ವತವಾದ ಕಟ್ಟಡ ನಿರ್ಮಿಸಬೇಕು ಎಂಬ ಉದ್ದೇಶದಿಂದ ಶೆಡ್ ನಿರ್ಮಿಸಲಾಗಿದೆ. ಎಲ್ಲರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟಡವನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಸಂಘ ಮುಂದಾಗಲಿದೆ. ಗಣಪತಿ ಸೇವಾ ಸಮಿತಿ, ಬಣ್ಣಾರಮ್ಮಾ ಸೇವಾ ಸಮಿತಿ, ಹನುಮ ಸೇವಾ ಸಮಿತಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಗ್ರಾಪಂ ಸದಸ್ಯರಾದ ಆಶಾ ವೆಂಕಟೇಶ್, ದೀಪಾ ಹಾಗೂ ಕೆ.ಬಿ. ಶಂಶುದ್ಧೀನ್, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ.

ಗಣಪತಿ ಸೇವಾ ಸಮಿತಿ, ಬಣ್ಣಾರಮ್ಮಾ ಸೇವಾ ಸಮಿತಿ, ಹನುಮ ಸೇವಾ ಸಮಿತಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾ.ಪಂ ಸದಸ್ಯ ಕೆ.ಬಿ. ಶಂಶುದ್ಧೀನ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net