

ಹಾಸನ: ಅಖಿಲ ಭಾರತ ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಬೆಂಗಳೂರಿನ ಸಂತೋಷ್ ಅವರು ಬುಧವಾರ ಅಭಿಮಾನಿಗಳೊಂದಿಗೆ ಬಂದು ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊದಿಗೆ ಮಾತನಾಡಿದ ಸಂತೋಷ್, ಅಖಿಲ ಭಾರತ ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಹಾಸನ ಜಿಲ್ಲೆಯಿಂದ ಸ್ಪರ್ಧೆ ಮಾಡುತ್ತಿದ್ದೇನೆ. 1933ರಲ್ಲಿ ವೀರ ಸಾವರ್ಕರರು ಅವರು ಅಖಿಲ ಭಾರತ ಹಿಂದೂ ಮಹಾಸಭಾ ಸ್ಥಾಪನೆ ಮಾಡಿದರು. ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಚಕ್ರಪಾಣಿ ಮಹಾರಾಜ್ ಅವರು ಮಹಾಸಭಾ ಸಂಘಟಿಸಿದ್ದಾರೆ. ಏಪ್ರಿಲ್ 26ರ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ನೀಡಿ ಆಶೀರ್ವದಿಸಿ. ರಾಜ್ಯದ 28 ಕ್ಷೇತ್ರಗಳಲ್ಲೂ ಮಹಾಸಭಾದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಹಿಂದೂಗಳು ನನಗೆ ಸಹಕಾರ ಕೊಡಲಿದ್ದಾರೆ ಎನ್ನುವ ಭರವಸೆ ನನಗೆ ಇದೆ ಎಂದು ಹೇಳಿದರು.
ಇದೇ ವೇಳೆ ಅಖಿಲ ಭಾರತ ಹಿಂದೂ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮನೋಜ್ ಕುಮಾರ್, ಕಾರ್ಯದರ್ಶಿ ನಾಗೇಶ್, ಉಪಾಧ್ಯಕ್ಷ ರವಿನಂದನ್, ಯುವ ಘಟಕದ ಅಧ್ಯಕ್ಷರಾದ ಪೂರ್ವಿಕಾ, ಮಂಜು, ಮೀನಾಕ್ಷಿ ಇತರರು ಉಪಸ್ಥಿತರಿದ್ದರು.