ನಾಮಪತ್ರ ಸಲ್ಲಿಕೆ ಭರಾಟೆ ಜೋರು

Photo-
Published on

ಬೀದರ್: ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಜಿಲ್ಲೆಯ ಐದು ತಾಲೂಕಿನಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ.

ಡಿ. 22ರಂದು ಮೊದಲ ಹಂತದಲ್ಲಿ ಜಿಲ್ಲೆಯ 106 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಬಸವಕಲ್ಯಾಣ ತಾಲೂಕಿನ 31, ಹುಲಸೂರು 4, ಹುಮನಾಬಾದ್ 19, ಚಿಟಗುಪ್ಪ 12 ಹಾಗೂ ಭಾಲ್ಕಿ ತಾಲೂಕಿನ 40 ಗ್ರಾಪಂಗಳು ಸೇರಿವೆ. ಐದು ತಾಲೂಕಿನಲ್ಲಿ ನಾಮಪತ್ರ ಸಲ್ಲಿಕೆ ಮುಂದುವರೆದಿದ್ದು, ಡಿ.11 ಕೊನೇ ದಿನವಾಗಿದೆ.

ಐದು ತಾಲೂಕುಗಳ 106 ಗ್ರಾಪಂಗಳ 1866 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಬುಧವಾರ ವರೆಗೆ 664 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದಿದೆ.

ಬಸವಕಲ್ಯಾಣ ತಾಲೂಕಿನಲ್ಲಿ 31 ಗ್ರಾಪಂಗಳಿದ್ದು, 578 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ತಾಲೂಕಿನಲ್ಲಿ ಎಸ್ಸಿ 65, ಎಸ್ಟಿ 25, ಹಿಂದುಳಿದ ವರ್ಗ (ಅ) 8, ಹಿಂದುಳಿದ ವರ್ಗ (ಬಿ) 1, ಸಾಮಾನ್ಯ 118 ಸೇರಿ ಒಟ್ಟು 217 ನಾಮಪತ್ರಗಳು ಸಲ್ಲಿಕೆಯಾಗಿವೆ. ಹುಲಸೂರಿನ 4 ಗ್ರಾಪಂಗಳ 77 ಸ್ಥಾನಗಳಿದ್ದು, ಒಟ್ಟು 19 ನಾಮಪತ್ರಗಳು ಸಲ್ಲಿಕೆಯಾಗಿವೆ.

ಹುಮನಾಬಾದ್ ತಾಲೂಕಿನಲ್ಲಿ 19 ಗ್ರಾಪಂಗಳ 350 ಸ್ಥಾನಗಳಿವೆ. ಎಸ್ಸಿ 74, ಎಸ್ಟಿ 31, ಹಿಂದುಳಿದ ವರ್ಗ (ಅ) 3, ಹಿಂದುಳಿದ ವರ್ಗ (ಬಿ) 2, ಸಾಮನ್ಯ 95 ಸೇರಿ ಒಟ್ಟು 205 ನಾಮಪತ್ರಗಳು ಸಲ್ಲಿಕೆಯಾಗಿವೆ. ಚಿಟಗುಪ್ಪ ತಾಲೂಕಿನ 12 ಗ್ರಾಪಂಗಳಲ್ಲಿ 249 ಸ್ಥಾನಗಳಿದ್ದು, ಒಟ್ಟು 117 ನಾಮಪತ್ರ ಸಲ್ಲಿಕೆಯಾಗಿವೆ. ಭಾಲ್ಕಿ ತಾಲೂಕಿನಲ್ಲಿ 40 ಗ್ರಾಪಂಗಳ 612 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಸ್ಸಿ 40, ಎಸ್ಟಿ 10, ಹಿಂದುಳಿದ ವರ್ಗ (ಅ) 6, ಹಿಂದುಳಿದ ವರ್ಗ (ಬ) 2, ಸಾಮಾನ್ಯ 48 ಸೇರಿ ಕೇವಲ 106 ನಾಮಪತ್ರ ಸಲ್ಲಿಕೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net